ಬ್ರಹ್ಮಾವರ : ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ , ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರ್, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಹಾಗೂ ಜನೌಷಧಿ ಕೇಂದ್ರ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಕಾಗಿ೯ಲ್ ಯುದ್ದ ವಿಜಯದ 25 ನೇ ವರ್ಷದ ಆಚರಣೆ ಅಂಗವಾಗಿ ಕಾರ್ಗಿಲ್ ವಿಜಯ್ ದಿವಸವನ್ನು ಎಸ್ ಎಮ್ ಎಸ್ ಪದವಿ ಪೂವ೯ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೊ. ಮೇಜರ್ ರಾಧಾಕೃಷ್ಣ ಎಮ್ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು ,ಕಾಗಿ೯ಲ್ ಯೋಧರ ಶೌರ್ಯ ಮತ್ತು ಬಲಿದಾನಗಳ ಬಗ್ಗೆ ಹಾಗೂ ಭಾರತೀಯ ಸೇನೆಯಲ್ಲಿರುವ ಹುದ್ದೆ ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊಫೇಸರ್ ಮೇಜರ್ ರಾಧಾಕೃಷ್ಣ ಎಮ್, ನಿವ್ರತ್ತ ಸೈನಿಕರಾದ ಭೂಸೇನೆಯ ಶ್ರೀ ಜಯರಾಮ ಶೆಟ್ಟಿ , ಬಿ.ಎಸ್.ಎಫ಼್ ನ ರಿಚರ್ಡ್ಡ್ ಫೆರ್ನಾಂಡಿಸ್ ಹಾಗೂ ವಾಯುದಳದ ಸ್ಟೀವನ್ ಡಿಸಿಲ್ವರವರನ್ನು ಸನ್ಮಾನಿಸಲಾಯಿತು .ಜೊತೆಯಲ್ಲಿ ಎನ್ ಸಿ ಸಿ ಅಧಿಕಾರಿಗಳಾದ ಶ್ರೀ ಜಿ ಬಾಲಕ್ರಷ್ಣ ಶೆಟ್ಟಿ ಮತ್ತು ಸೆಕೆಂಡ್ ಆಫೀಸರಾದ ಶ್ರೀ ವಿಷ್ಣುದಾಸ್ ಉಪಾಧ್ಯಾರವರನ್ನು ಗೌರವಿಸಲಾಯಿತು. ಪ್ರಾಂಶುಪಾಲರಾದ ಲಯನ್ ಐವನ್ ದೊನಾತ್ ಸುವಾರಿಸ್ ರವರು ಸ್ವಾಗತಿಸಿದರು. ಲಯನ್ ಅಧ್ಯಕ್ಷರಾದ ಲಯನ್ ಎಸ್ ಜಯರಾಮ ನಾಯಕ್ , ಜಯಂಟ್ಸ್ ಅಧ್ಯಕ್ಷರಾದ ಶ್ರೀ ಸುಂದರ ಪೂಜಾರಿ, ಜಯಂಟ್ಸ್ ಸಲಹಾ ಅಧಿಕಾರಿ ಶ್ರೀ ಮಧುಸೂಧನ್ ಹೇರೂರು, ಜಯಂಟ್ಸ್ ವಲಯ ಅಧಿಕಾರಿ ಶ್ರೀ ವಿಕ್ರಮ್ ಕಾಮತ್ ಮತ್ತು ಕಾರ್ಯದಶಿ೯ ಶ್ರೀ ಮಿಲ್ಟನ್ ಒಲಿವೆರಾ ಉಪಸ್ತಿತರಿದ್ದರು. ಉಪನ್ಯಾಸಕ ಶ್ರೀ ಸೀಸರ್ ಗೊನ್ಸಾಲ್ವಿಸ್ ವಂದಿಸಿ ,ಶ್ರೀ ಸಂತೋಷ್ ನೀಲಾವರ್ ನಿರೂಪಿಸಿದರು.