ಉಡುಪಿ:ನ.7 ಕರಾವಳಿ ಕ್ರಿಶ್ಚಿಯನ್ ಚೇಂಬರಿನ ಸದಸ್ಯರು ಮತ್ತು ಉದ್ಯಮ (ರಿ) ಇದರ ದಶಮಾನೋತ್ವವ ಕಾರ್ಯಕ್ರಮ ಪ್ರಯುಕ್ತ ಉಡುಪಿ ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ಸಂಘದ ಕುಟುಂಬ ಸಹಮಿಲನ ನ. 6 ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಾಲ್ಟರ್ ನಂದಳಿಕೆ, ”ಮಂಗಳೂರಿಗಿಂತಲೂ ಹೆಚ್ಚು ಉದ್ಯಮಿಗಳನ್ನು ಉಡುಪಿ ಜಿಲ್ಲೆಯಲ್ಲಿ ಹೊಂದಿವೆ, ಸಂಖ್ಯೆಯಿಂದಲ್ಲದೆ ಇರಬಹುದು ಆದರೆ ಸಮುದಾಯದ ಬಗ್ಗೆ ಬದ್ಧತೆ ಕಾಳಜಿಯಿಂದ ಕೂಡಿದ ಉದ್ಯಮಿಗಳು ಇದ್ದಾರೆ. ನಮ್ಮ ಸಮುದಾಯ ಬಲಿಷ್ಠಗೊಳಿಸಲು ಇಂತಹ ಸಂಘಟನೆಗಳ ಅಗತ್ಯವಿದೆ. KCCCI ಇಂದು ತನ್ನ ದಶಮಾನೋತ್ಸವವಕ್ಕೆ ಶುಭ ಹಾರೈಸಿದ ಅವರು ಪ್ರಸಿದ್ಧ ವಾಣಿಜ್ಯೋದ್ಯಮಿ ಮತ್ತು ಲೋಕೋಪಕಾರಿ ರೊನಾಲ್ಡ್ ಕೊಲಾಕೊ ಅವರ ಕೊಡುಗೆಯನ್ನು ನೆನಪಿಸಿಕೊಂಡ ಅವರು, “ಅವರು IFKCA ಯ ಪೋಷಕರಾಗಿದ್ದರು. ಉಡುಪಿ ಪ್ರದೇಶವು ಒಂದು ಹೆಜ್ಜೆ ಮುಂದೆ ಹೋಗಿ KCCCI ಅನ್ನು ರಚಿಸಿತು. ಕುಟುಂಬಕ್ಕಾಗಿ ದುಡಿಯುವ ಅನೇಕರನ್ನು ನಾವು ನೋಡಬಹುದು. ತನ್ನ ಕುಟುಂಬಕ್ಕಾಗಿ ದುಡಿಯುವವನು ಒಂದು ದಿನ ತನ್ನ ಸಂಪೂರ್ಣ ಸಂಪತ್ತನ್ನು ತನ್ನ ಹತ್ತಿರದ ಕುಟುಂಬ ಸದಸ್ಯರಿಗೆ ಬಿಟ್ಟು ಇಹಲೋಕ ತ್ಯಜಿಸುತ್ತಾನೆ. ಆದರೆ ಒಬ್ಬ ವ್ಯಕ್ತಿಯು ಸಮಾಜಕ್ಕಾಗಿ ಕೆಲಸ ಮಾಡಿದರೆ, ಅವನು ಪುಣ್ಯವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾನೆ.
“ಡಾ ಜೆರ್ರಿ ವಿನ್ಸೆಂಟ್ ಡಯಾಸ್ ಅವರು ಸಮುದಾಯವನ್ನು ಬಲಪಡಿಸಲು ಶ್ರಮಿಸುತ್ತಾರೆ, ಅದಕ್ಕಾಗಿ ಅವರು ಇಂತಹ ಸಂಸ್ಥೆಗಳಿಗೆ ಸಮಯ ನೀಡುತ್ತಾರೆ.ಅದು ಅವರ ಸಮರ್ಪಣೆಯಾಗಿದೆ. ಅವರ ಜೊತೆಗೆ ಇಂದು ಸಂಜೆ ಇಲ್ಲಿ ಸೇರಿರುವವರು ಕೂಡ ಸಮಾಜಕ್ಕೆ, ಸಮುದಾಯಕ್ಕೆ ಏನಾದರೂ ಮಾಡಬೇಕೆಂದು ಸಮರ್ಪಿಸಿಕೊಂಡಿದ್ದಾರೆ.
“ಇಂದು, ನಮ್ಮ ಸಮುದಾಯವು ಅಪಾಯದಲ್ಲಿದೆ ಇತರರಿಂದ ಅಲ್ಲ, ಆದರೆ ನಮ್ಮ ಆಲೋಚನೆಗಳಿಂದ. ನಾವು ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ. ಐಎಎಸ್, ಐಪಿಎಸ್ ಮತ್ತು ಕೆಎಎಸ್ ಮತ್ತು ವಿಶೇಷವಾಗಿ ರಾಜಕೀಯ ಪಕ್ಷಗಳಲ್ಲಿ ನಮ್ಮ ಸಮುದಾಯದವರು ವಿರಳರಾಗಿದ್ದಾರೆ. ಈ ಕ್ಷೇತ್ರಗಳಲ್ಲಿ ನಮ್ಮ ಪ್ರತಿನಿಧಿಗಳು ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯ ಬಲಿಷ್ಠವಾಗಲಿದೆ. ಇಂದು ನಮಗೆ ಹೆಚ್ಚಿನ ಸಮಸ್ಯೆಗಳಿಲ್ಲದಿರಬಹುದು, ಆದರೆ ಮುಂದಿನ ವರ್ಷಗಳಲ್ಲಿ, ಖಂಡಿತವಾಗಿಯೂ ನಾವು ಕೆಲವು ತೊಂದರೆಗಳಿಗೆ ಒಳಗಾಗುತ್ತೇವೆ. ಇಲ್ಲಿಯವರೆಗೆ ನಾವು ಯಾವುದೇ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿದ್ದೇವೆ, ಆದರೆ ನಮ್ಮ ಸಮುದಾಯವು ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವನ್ನು ಕಂಡುಕೊಳ್ಳುವಂತೆ ಮಾಡುವಕೆಲಸ ಆಗಬೇಕು. ರಾಕೀಯದಲ್ಲಿ ಸೇರಲು ಹೆಚ್ಚಿನ ಜನರು ಮುಂದೆ ಬರಬೇಕು, ”ಎಂದು ಅವರು ಹೇಳಿದರು.
ಕೆಸಿಸಿಸಿಐನ ಗೌರವಾಧ್ಯಕ್ಷ ಡಾ ಜೆರ್ರಿ ಡಯಾಸ್ ತಮ್ಮ ಸಂದೇಶದಲ್ಲಿ, “ನಾವು ಎಷ್ಟು ವೇಗವಾಗಿ ದಶಮಾನ ವರ್ಷವನ್ನು ತಲುಪಿದ್ದೇವೆ ಎಂದು ಅನ್ನಿಸುತಿದೆ.. ಮೊದಲ ಮೂರು ವರ್ಷಗಳಲ್ಲಿ, ರೊನಾಲ್ಡ್ ಕೊಲಾಸೊರವರು ಈ ಸಂಸ್ಥೆಯನ್ನು ನಿರ್ಮಿಸಲು ತಮ್ಮ ಯೋಗದಾನವನ್ನು ನೀಡಿದರು. ಹಾಗಾಗಿ ಇಂದು ನಾವು ಬಲವಾದ ತಂಡವನ್ನು ಹೊಂದಿದ್ದೇವೆ.“ಹಲವು ಸಂದರ್ಭಗಳಲ್ಲಿ, ನಮ್ಮ ಸಮುದಾಯದ ಉದ್ಯಮಿಗಳಿಗೆ ಬಿಲ್ಡರ್ ಆಗಲು ಮುಂದೆ ಬರುವಂತೆ ನಾನು ಸಲಹೆ ನೀಡಿದ್ದೇನೆ. ನಾವು ಶೇಕಡಾವಾರು ಜೊತೆ ಹೋಗಬಾರದು, ಆದರೆ ಉತ್ಪನ್ನಗಳ ಗುಣಮಟ್ಟದೊಂದಿಗೆ ಸಾಗಬೇಕು. ನಾನು ವೈಯಕ್ತಿಕವಾಗಿ ನೆರವನ್ನು ನೀಡುತ್ತಿದ್ದೇನೆ ಮತ್ತು ಅಗತ್ಯವಿರುವ ಅನೇಕರಿಗೆ ಸಹಾಯ ಮಾಡುತ್ತಿದ್ದೇನೆ ಇದರಿಂದಾಗಿ ದಿನದ ಕೊನೆಯಲ್ಲಿ ನನಗೆ ಸಂತೋಷ ಮತ್ತು ತೃಪ್ತಿ ಸಿಗುತ್ತದೆ.
“ಸಂಘಗಳಿಗೆ ಸದಸ್ಯರನ್ನು ಸೇರಿಸಲು ನಾವು ಕುಂದಾಪುರ ಮತ್ತು ಕಾರ್ಕಳಕ್ಕೆ ಪ್ರಯಾಣಿಸಿದ್ದೇವೆ, . ನಾನು ನನ್ನ ಮಕ್ಕಳು ಮತ್ತು ಮೊಮ್ಮಕ್ಕಳನ್ನು ನನ್ನ ಉದ್ದಿಮೆಯಲ್ಲಿ ಸೇರಿಸಿಕೊಂಡಿದ್ದೆನೆ.ಕೆಲವರು ತಮ್ಮ ಮಕ್ಕಳನ್ನು ನಮ್ಮ ವ್ಯವಹಾರದಲ್ಲಿ ತೊಡಗಿಸುತ್ತಿಲ್ಲ,ಅವರಿಗೆ ಶಿಕ್ಷಣವನ್ನು ನೀಡಿ ಅವರನ್ನು ಪರದೇಶಕ್ಕೆ ಕಳುಹಿಸಲು ಆಸಕ್ತಿಯನ್ನು ತೋರಿಸುತ್ತಿದ್ದೆವೆ.
“ಗಲ್ಫ್‌ನಿಂದ ಹಿಂದಿರುಗಿದ ನಂತರ, ನಾನು ದೊಡ್ಡ ಬಿಲ್ಡರ್ ಆಗಬೇಕೆಂದು ಯೋಚಿಸಲಿಲ್ಲ, ಆದರೆ ಸಣ್ಣ ಗುರಿಯೊಂದಿಗೆ ಪ್ರಾರಂಭಿಸಿದೆ. ನಾನು ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ನಾನು ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುತ್ತಿದ್ದೆ ಅಲ್ಲಿರುವಾಗ ನಾನು ಇತರರಿಗೆ ಕೆಲಸ ಹುಡುಕಲು ಸಹಾಯ ಮಾಡಲು ನನ್ನ ಕೈಲಾದಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಹಾಗೆ ನನ್ನ ಯೋಜನೆಗಳಿಂದ ಸಾವಿರಕ್ಕೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ಹೇಳಲು ಕೂಡ ನನಗೆ ಸಂತೋಷವಾಗಿದೆ ಮತ್ತು ಮುಂದಿನ ದಿನಗಳಲ್ಲಿ ನನ್ನ ಹೊಸ ಯೋಜನೆಗಳ ಮೂಲಕ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಪ್ರಯೋಜನ ಪಡೆಯಲಿವೆ’ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾದ ಖ್ಯಾತ ಉದ್ಯಮ ಕುಟುಂಬಸ್ಥರಾದ ಪ್ರಕಾಶ್ ಪಿ ಸೋನ್ಸ್ ’ಉತ್ತಮವಾದ ವಿಷಯಗಳನ್ನು ಮಾಡಲು ನಾವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿದೆ. ಗ್ರಾಹಕರನ್ನು ಸಂತೋಷಪಡಿಸುವುದು ಇಂದಿನ ಅಗತ್ಯವಾಗಿದೆ. ಎಲ್ಲಾ ಉದ್ಯಮಗಳು ಪ್ರತಿಸ್ಪರ್ಧಿಗಳನ್ನು ಹೊಂದಿವೆ ಮತ್ತು ನಾವು ಎಲ್ಲರನ್ನು ಒಟ್ಟಿಗೆ ತೆಗೆದುಕೊಳ್ಳಬೇಕಾಗಿದೆ. ನಾವು ಒಗ್ಗಟ್ಟಾಗಿದ್ದರೆ, ನಾವು ಬಲಶಾಲಿಯಾಗಬಹುದು. ಕಷ್ಟದ ಸಮಯದಲ್ಲಿ ಒಟ್ಟಿಗೆ ಇರಲು ಒಂದು ಸಂಘವು ಹೇಗೆ ಸಹಾಯ ಮಾಡುತ್ತದೆ ಮತ್ತು ಎಲ್ಲರಿಗೂ ಹೇಗೆ ಪ್ರಯೋಜನವಾಗುತ್ತದೆ ಎಂಬುದನ್ನು ಅವರು ವಿವರಿಸಿದರು.
ಸಮಾರಂಭದಲ್ಲಿ ಸಂಘದ ಸದಸ್ಯರು ಹಾಗೂ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಮಂತಾ ಮತ್ತು ಡೆಲಿಸಿಯಾ ಮಸ್ಕರೇನ್ಹಸ್ ಪ್ರಾರ್ಥನೆ ನಡೆಸಿದರು. ಕರಾವಳಿ ಕ್ರಿಶ್ಚಿಯನ್ ಚೇಂಬರಿನ ಸದಸ್ಯರು ಮತ್ತು ಉದ್ಯಮ ಸಂಘದ ಅಧ್ಯಕ್ಷ ಸಂತೋಷ್ ಡಿ’ಸಿಲ್ವ ಸ್ವಾಗತಿಸಿದರು, ಕಾರ್ಯದರ್ಶಿ ಜೊಯೆನ್ ಲುವಿಸ್ ಉಪಸ್ಥಿತರಿದ್ದು, ಖಚಾಂಚಿ ಅಲ್ವಿನ್ ಕ್ವಾಡ್ರಾಸ್ ವಂದಿಸಿದರು. ಜೋಯಲ್ ಡಿ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.