![](https://jananudi.com/wp-content/uploads/2025/02/000000-JANANUDI-3.png)
![](https://jananudi.com/wp-content/uploads/2025/02/WhatsApp-Image-2025-02-10-at-4.05.58-PM.jpg)
ಫೆಬ್ರವರಿ 5, 2025 ರಂದು ಬೆಂಗಳೂರಿನ ಯಲಹಂಕದಲ್ಲಿ ನಡೆದ ಕರ್ನಾಟಕ ಯುವ ಕ್ರೀಡಾ ಉತ್ಸವದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಬ್ರೌನ್ ಬೆಲ್ಟ್ 17 ವಯಸ್ಸಿನೊಳಗಿನ ವಿಭಾಗದ ಕಟಾದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿ -45ಕೆಜಿ ವಿಭಾಗದ ಕುಮಿಟೆಯಲ್ಲಿ ಬೆಳ್ಳಿ ಪದಕವನ್ನು ಪಡೆದು ತನ್ನ ಪದಕಗಳ ಭೇಟೆಯನ್ನು ಮುಂದುವರೆಸಿದ್ದಾರೆ.
ಇಲ್ಲಿಯ ತನಕ 16 ಚಿನ್ನ 8 ಬೆಳ್ಳಿ ಮತ್ತು 3 ಕಂಚಿನ ಪದಕದ ಜೊತೆ ಒಟ್ಟಾರೆ 27 ಪದಕಗಳನ್ನು ಸಂಪಾದಿಸಿರುವ ಸಾನಿಧ್ಯ, 2024 ಸಾಲಿನ ಡಾ. ಶಿವರಾಮ ಕಾರಂತ ಪುರಸ್ಕಾರಕ್ಕೆ ಭಾಜರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಇವಳು ಕುಂದಾಪುರದ ಖಾರ್ವಿ ಕೇರಿ ನಿವಾಸಿಗಳಾದ ಸಂತೋಷ ನಾಯ್ಕ್, ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ಗ್ರಂಥಾಪಾಲಕಿ ಶ್ಯಾಮಲ ಅವರ ಪುತ್ರಿ, ಗುರುಕುಲ ಪಬ್ಲಿಕ್ ಸ್ಕೂಲ್ ನ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಕುಂದಾಪುರದ ಕೆಡಿಎಫ್ ಕರಾಟೆ ಶಾಲೆಯ ವಿದ್ಯಾರ್ಥಿನಿ, ಇವಳನ್ನು ಕಿಯೋಶಿ ಕಿರಣ್ ಕುಂದಾಪುರ, ಸಂದೀಪ್ ವಿಕೆ, ಮತ್ತು ಸೆನ್ಸೈ ಶಿಹಾನ್ ಶೇಖ್ ಇವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿದ್ದಳೆ, ಹಾಗೂ ಪಡೆಯುತ್ತಾ ಇದ್ದಾಳೆ.