ಕೋಲಾರ,ಡಿ.11: ನವದೆಹಲಿಯಲ್ಲಿ ಭಾರತೀಯ ಮಹಿಳಾ ಸಾಧನೆಗಳ ಪ್ರಶಸ್ತಿ 2023ನ್ನು ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳಾ ಸಾಧನೆಗಳ ಪ್ರಶಸ್ತಿ 2023ನ್ನು ಹಾಗೂ ಮೆರಿಟ್ ಸರ್ಟಿಫಿಕೇಟನ್ನು ಅಂತರಾಷ್ಟ್ರೀಯ ಕರಾಟೆಪಟು ನಗರದ ಮಹಾಲಕ್ಷ್ಮೀ ಲೇಔಟ್ನ ನಿವಾಸಿ ರುಮಾನಾ ಕೌಸರ್ ಬೇಗ್ ಪಡೆದುಕೊಂಡಿದ್ದಾರೆ.
ಕರಾಟೆ ಕ್ರೀಡೆಯಲ್ಲಿ ವಸತಿ ಶಾಲೆಗಳ 3000 ಬಾಲಕಿಯರಿಗೆ ಆತ್ಮ ರಕ್ಷಣೆ ಕಲೆಯನ್ನು ತರಬೇತಿ ನೀಡುತ್ತಿರುವ ಕೋಲಾರ ಜಿಲ್ಲೆಯ ಕರ್ನಾಟಕ ರಾಜ್ಯದ ರುಮಾನಾ ಕೌಸರ್ ಬೇಗ್ ರಾಜ್ಯ ಮಟ್ಟದಲ್ಲಿ 30 ಪದಕಗಳು ಮತ್ತು 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಟ್ರೋಫಿಗಳನ್ನು ಗಳಿಸಿದ ಸಾಧನೆಗಳ ದಾಖಲೆಯನ್ನು ಮಾಡಿದ್ದಾರೆ. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವ ರುಮಾನಾ ಕೌಸರ್ ಬೇಗ್ ಇತ್ತೀಚೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಸಾಧಕರ ರತ್ನ ರಾಷ್ಟ್ರೀಯ ಪ್ರಶಸ್ತಿ ಕ್ರೀಡಾ ಸೇವೆಯಲ್ಲಿ 2023ರ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ತಂದೆ ರಶೀದ್ ಅಹಮದ್, ತಾಯಿ ಶಭಾನಾ, ಪತಿ ಕೌಸರ್ ಬೇಗ್ ಎಲ್ಲಾ ರೀತಿಯ ಸಹಕಾರ. ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.