ಕಾಪು : ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಉದ್ಘಾಟನೆ

JANANUDI.COM NETWORK


ಭಾರತೀಯ ಆಯುರ್ವೇದ ವೈದ್ಯಕೀಯ ಪದ್ಧತಿ ದೇಹಾರೋಗ್ಯ ಕಾಪಾಡಲು ಶ್ರೇಷ್ಠವಾದ ಚಿಕಿತ್ಸಾ ಪದ್ಧತಿ ಎಂಬ ನಂಬಿಕೆ ವ್ಯಾಪಕವಾಗಿದೆ. ಇದು ಕೊರೊನಾ ಸೋಂಕಿನ ಸಂದರ್ಭದಲ್ಲಿ ಇನ್ನಷ್ಟು ದೃಢಪಟ್ಟಿದೆ. ಆಯುರ್ವೇದ ಹಾಗೂ ಗಿಡಮೂಲಿಕೆಗಳ ಔಷಧ ಸೇವಿಸಿ ಬಹಳಷ್ಟು ಜನರು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ. ಆಂಗ್ಲ ವೈದ್ಯಕೀಯ ವ್ಯವಸ್ಥೆಯ ನಡುವೆಯೂ ಆಯುರ್ವೇದ ವೈದ್ಯಕೀಯ ಚಿಕಿತ್ಸೆ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವುದು ನಿಷ್ಠಾವಂತ ವೈದ್ಯರ ಉತ್ತಮ ಸೇವೆಯಿಂದ ಈ ಪದ್ಧತಿಯಲ್ಲಿ ಉನ್ನತ ಶಿಕ್ಷಣ ಪಡೆದ . ಯುವ ದಂಪತಿ ಕಾಪುವಿನಲ್ಲಿ ಚಿಕಿತ್ಸಾಲಯ ತೆರೆದಿರುವುದು ಸಂತೋಷದ ವಿಚಾರ. ಇವರು ಜನಪ್ರಿಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯಲಿ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾಪು, ಉಳಿಯಾರಗೋಳಿ, ಕೊತ್ತಲಕಟ್ಟೆ ಬಸ್‍ಸ್ಟೇಂಡ್ ಬಳಿ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವೈದ್ಯರಾದ ಡಾ. ಸದಾನಂದ ಭಟ್ ಹಾಗೂ ಡಾ. ಸುಷ್ಮಾ ಎಸ್. ಭಟ್ ಅವರನ್ನು ಅವರು ಅಭಿನಂದಿಸಿ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ , ಕೆ.ಎಂ.ಎಫ್.ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ, ಕೆ.ಎಂ.ಸಿ. ಆಯುರ್ವೇದ ವಿಭಾಗದ ಮಾಜಿ ಮುಖ್ಯಸ್ಥ ಡಾ.ಎಂ.ಎಸ್.ಕಾಮತ್, ಎಸ್.ಡಿ.ಎಂ. ಆಯುರ್ವೇದ ಕಾಲೇಜು ಉಡುಪಿಯ ರೋಗನಿದಾನ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಎನ್. ಮೊಗಸಾಲೆ , ಶಿವಾನಿ ಡಯಾಗ್ನಾಸ್ಟಿಕ್ ಮುಖ್ಯಸ್ಥ ಡಾ. ಶಿವಾನಂದ ನಾಯಕ್ , ಚಂದ್ರಹಾಸ್ ಶೆಟ್ಟಿ ಆಗಮಿಸಿದ್ದರು.
ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್‍ನ ಡಾ. ಸದಾನಂದ ಭಟ್ ಸ್ವಾಗತಿಸಿದರು. ಡಾ. ಸುಷ್ಮಾ ಎಸ್.ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹರಿಖಂಡಿಕೆ ಗೋಪಾಲಕೃಷ್ಣ ನಾಯಕ್ ಲಕ್ಷ್ಮೀಂದ್ರ ಭಟ್ ಕಾಪು ಅತಿಥಿಗಳನ್ನು ಗೌರವಿಸಿದರು.
ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ ನಿರೂಪಿಸಿದರು. ಶ್ರೀಮತಿ ನಾರಾಯಣಿ ನಾಯಕ್ ಹರಿಖಂಡಿಕೆÉ, ಶ್ರೀಮತಿ ವಿದ್ಯಾ ಎಲ್.ಭಟ್ ಕಾಪು ಉಪಸ್ಥಿತರಿದ್ದರು. ದಯಾನಂದ ಭಟ್ ವಂದಿಸಿದರು.
ಪ್ರತಾಪ್ ಸಿಂಹ ನಾಯಕ್ ಭೇಟಿ :
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಇವರು ಕಾಪುಗೆ ಆಗಮಿಸಿ ನೂತನ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಭೇಟಿನೀಡಿ ಡಾ| ಸದಾನಂದ ಭಟ್, ಡಾ.ಸುಷ್ಮಾ ಎಸ್.ಭಟ್ ಅವರನ್ನು ಅಭಿನಂದಿಸಿ ಶುಭಹಾರೈಸಿದರು.
ಹರಿಖಂಡಿಕೆ ಗೋಪಾಲಕೃಷ್ಣ ನಾಯಕ್, ಶಾಸಕರನ್ನು ಗೌರವಿಸಿದರು.