ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯ ವೈಶ್ಯ ಸಮುದಾಯದ ವತಿಯಿಂದ ಕನ್ಯಕಾಪರಮೇಶ್ವರಿ ಆತ್ಮಾರ್ಪಣಾ ದಿನೋತ್ಸವ

ಶ್ರೀನಿವಾಸಪುರ: ಇಲ್ಲಿನ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯ ವೈಶ್ಯ ಸಮುದಾಯದ ವತಿಯಿಂದ ಕನ್ಯಕಾಪರಮೇಶ್ವರಿ ಆತ್ಮಾರ್ಪಣಾ ದಿನೋತ್ಸವ ಆಚರಿಸಲಾಯಿತು. ಆತ್ಮಾರ್ಪಣಾ ದಿನಾಚರಣೆ ಪ್ರಯುಕ್ತ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ದೇವಿ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಗೆ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ. ದೇವಿ ಮೂಲ ವಿಗ್ರಹಕ್ಕೆ 108 ಕಳಶಗಳಿಂದ ವಿಶೇಷ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಸಂಜೆ ಉಯ್ಯಾಲೋತ್ಸವ ಹಾಗೂ ಪ್ರಾಕಾರೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಕನ್ಯಕಾಪರಮೇಶ್ವರಿ ಆತ್ಮಾರ್ಪಣೆ ದಿನೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಆರ್ಯವೈಶ್ಯ ಸಮುದಾಯದ ಅಂಗಡಿಗಳಿಗೆ ರಜೆ ಘೋಷಿಸಲಾಗಿತ್ತು.