ಕನ್ನಡಿಗ ಕ್ರಿಕೆಟ್ ವೀರ ಕೆ.ಎಲ್. ರಾಹುಲ್ 31 ಲಕ್ಷ ರೂಪಾಯಿ ದೇಣಿಗೆ ನೀಡಿ ಬಾಲಕನ ಜೀವ ಉಳಿಸಿ ದಾನವಿರರಾಗಿದ್ದಾರೆ

JANANUDI.COM NETWORK

ಕೆ.ಎಲ್. ರಾಹುಲ್ ಕ್ರಿಕೆಟ್ ಆಟದಲ್ಲಿ ವೀರರಾಗಿದ್ದಾರೆ, ಈಗ ದಾನವೀರನೆಂಬ ಖ್ಯಾತರಾಗಿದ್ದಾರೆ. ಯಾರಿಗೂ ತಿಳಿಯದಂತೆ ಆದ್ರೆ ಈಗ ಕೆ.ಎಲ್. ರಾಹುಲ್ ಸಮಾಜ ಸೇವೆ ಮಾಡುತಿದ್ದರು, ಅವರಿಗ ಬಹು ದೊಡ್ಡ ಮೊತ್ತ ದಾನ ಮಾಡಿ ತನ್ನ ಮಾನವಿಯತೆಯ ಗುಣಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಇದೀಗ ಕೆ.ಎಲ್. ರಾಹುಲ್ ಅವರು 11 ವರ್ಷದ ಬಾಲಕನ ಜೀವ ಉಳಿಸಲು 31 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಇತರ ಕ್ರೀಡಾಳುಗಳಿಗೆ ಮಾದರಿಯಾಗಿದ್ದಾರೆ
ವರದ್ ನಲ್ವಾಡೆ ಎಂಬ 11 ವರ್ಷದ ಬಾಲಕ ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಕಳೆದ ಸೆಪ್ಟಂಬರ್ ನಿಂದ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಈ ಖಾಯಿಲೆಯ ಚಿಕಿತ್ಸೆಗೆ ೩೫ ಲಕ್ಷ ಹಣ ಬೇಕಾಗಿತ್ತು ಬೇಕಾಗಿತ್ತು.
ವರದ್ ನಲ್ವಾಡೆಯ ಹೆತ್ತವರು ಮಗನನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರು. ವೃತ್ತಿಯಲ್ಲಿ ವಿಮಾ ಕಂಪೆನಿಯ ಏಜೆಂಟ್ ಆಗಿರುವ ವರದ ನೆಲ್ವಾಡೆಯ ತಂದೆ ಸಚಿನ್ ಮತ್ತು ತಾಯಿ ಸ್ವಪ್ನ ಮಗನ ಚಿಕಿತ್ಸೆಗಾಗಿ ಎನ್ ಜಿ ಒ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಮಾಡುತ್ತಿದ್ದರು.
ಈ ವಿಷಯವನ್ನು ತಿಳಿದ ತಕ್ಷಣ ಕೆ. ಎಲ್. ರಾಹುಲ್ 31 ಲಕ್ಷ ರೂಪಾಯಿ ದೇಣಿಗೆ ನೀಡಿ ಬಾಲಕನ ಜೀವವನ್ನು ಉಳಿಸಲು ನೆರವಾಗಿದ್ದಾರೆ. ಕೆ.ಎಲ್. ರಾಹುಲ್ ಹೃದಯವಂತಿಕೆಗೆ ವರದ ನಲ್ವಾಡೆ ಅವರ ಹೆತ್ತವರು ಧನ್ಯವಾದಗಳನ್ನು ಹೇಳಿದ್ದಾರೆ. ಇನ್ನೊಂದೆಡೆ ವರದ್ ನಲ್ವಾಡೆಯ ಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಕೆ.ಎಲ್. ರಾಹುಲ್ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಅಗತ್ಯ ನೆರವು ಬೇಕಾದವರಿಗೆ ಸಹಾಯ ಮಾಡಲು ಇದು ಪ್ರೇರಣೆಯಾಗಲಿ ಎಂದು ಕೆ.ಎಲ್. ರಾಹುಲ್ ಹೇಳಿದ್ದಾರೆ. ಕನ್ನಡಿಗರಾದ ನಮಗೆ ಕೆ.ಎಲ್. ರಾಹುಲ್ ನಮಗೆ ಹೆಮ್ಮೆ.