ಖಾಸಗಿ ಕ್ಷೇತ್ರದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಲಿ – ಸಿಎಂಆರ್ ಶ್ರೀನಾಥ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಕನ್ನಡ ಬಳಕೆ ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ ಖಾಸಗಿ ಕ್ಷೇತ್ರದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್‌ ಶ್ರೀನಾಥ್ ಹೇಳಿದರು . ಭಾರತ ಸೇವಾದಳ ಜಿಲ್ಲಾ ಘಟಕ , ಬಿಇಒ ಕಚೇರಿ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ೬೬ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು . ಕನ್ನಡ ಯುವರತ್ನ ಪುನೀತ್ ರಾಜ್‌ಕುಮಾರ್ ನಿಧನದಿಂದ ರಾಜ್ಯೋತ್ಸವ ಕಳೆಗುಂದಿದ್ದು , ಇದರಿಂದ ಸಾಂಕೇತಿಕವಾಗಿ ರಾಜ್ಯೋತ್ಸವವನ್ನು ಎಲ್ಲೆಡೆ ಆಚರಿಸಲಾಗುತ್ತಿದೆಯೆಂದರು . ಕ್ಷೇತ್ರ ಶಿಕ್ಷಣಾಕಾರಿ ರಾಮಕೃಷ್ಣಪ್ಪ ಮಾತನಾಡಿ , ಕನ್ನಡವನ್ನು ಕಾಯಾವಾಚಾಮನಸಾ ಬಳಸಲು ಪ್ರತಿಯೊಬ್ಬ ಕನ್ನಡಿಗರೂ ಮುಂದಾಗಬೇಕೆಂದು ಹೇಳಿದರು . ಕನ್ನಡ ಧ್ವಜಾರೋಹಣ ನೆರವೇರಿಸಿದ ಭಾರತಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ನಿತ್ಯವೂ ಅಗತ್ಯವಿರುವೆಡೆಯೆಲ್ಲಾ ಕನ್ನಡವನ್ನು ಬಳಸುವುದರ ಮೂಲಕ ಮಾತ್ರವೇ ಕನ್ನಡವನ್ನು ಸಮೃದ್ಧಿಯಾಗಿ ಬಳಸಲು ಸಾಧ್ಯ ಇದುವರೆವಿಗೂ ಕನ್ನಡ ಬಳಕೆಯಲ್ಲಿದೆಯೆಂಬುದಕ್ಕೆ ಸರಕಾರಿ ಶಾಲಾ ಶಿಕ್ಷಕರ ನಿರಂತರ ಕಲಿಕೆಯೇ ಕಾರಣವಾಗಿದಯುದು ಶ್ಲಾ ಸಿದರು . ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿಗಳಾದ ಎಸ್‌.ಸುಧಾಕರ್‌ , ಆರ್.ಶ್ರೀನಿವಾಸನ್ , ಅಪ್ಪಿ ನಾರಾಯಣಸ್ವಾಮಿ , ವೈ.ಶಿವಕುಮಾರ್‌ , ಬಿಇಒ ಕಚೇರಿ ಸಿಬ್ಬಂದಿಯಾದ ಗಿರೀಶ್ , ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ , ಕೆ.ಜಯದೇವ್ , ವಿವಿಧ ಶಾಲೆಗಳಮುಖ್ಯಶಿಕ್ಷಕರು , ಶಿಕ್ಷಕಿಯರು , ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಇತರರು ಭಾಗವಹಿಸಿದ್ದರು . ಕನ್ನಡ ಧ್ವಜಾರೋಹಣೆ , ವಂದೇ ಮಾತರಂ ಮತ್ತು ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು . ನೆರೆದಿದ್ದ ಮಕ್ಕಳಿಗೆ ಸಿಹಿ ವಿತರಿಸಲಾಯಿತು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ