JANANUDI.COM NETWORK
ಕುಂದಾಪುರ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಅಂಬೇಡ್ಕರ್ ಓದು ಎನ್ನುವ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ ನಾರಾಯಣಶೆಟ್ಟಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ವಿಶ್ವದ ಪ್ರಭಾವಿ ವಿದ್ಯಾವಂತ ನಾಯಕರಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಒಬ್ಬರು.ಅವರು ಒಂದು ಜನಾಂಗಕ್ಕೆ ಮಾತ್ರ ಸೀಮಿತರಾದವರಲ್ಲ.ಅವರು ನಮ್ಮ ರಾಷ್ಟ್ರದ ಸಂಪತ್ತೆಂದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ ಡಾ.ಜಯಪ್ರಕಾಶ ಶೆಟ್ಟಿಯವರು ಹಿಂದೆ ದಲಿತರ ಮೇಲಾಗಿರುವ ದೌರ್ಜನ್ಯ ದ ಘಟನೆಗಳನ್ನು ಎಳೆ ಎಳೆಯಾಗಿ ವಿವರಿಸಿದರು.ಶೋಷಣೆ ಸಮಾಜದಿಂದ ಇನ್ನೂ ದೂರವಾಗಲ್ಲ. ಅದು ರೂಪವನ್ನು ಬದಲಿಸಿಕೊಂಡಿದೆ.ಅಂಬೇಡ್ಕರ್ ರನ್ನು ಹೂ ಹಣ್ಣು ಇಟ್ಟು ಆರಾಧನೆಯನ್ನು ಮಾಡುವುದಕ್ಕಿಂತ ಅವರ ಕುರಿತಾದ ಪುಸ್ತಕವನ್ನು ಓದಿ ಒಳ್ಳೆಯ ಮೌಲ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮವೆಂದು ನುಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ.ವಿ. ಬನ್ನಾಡಿಯವರು ಧನ್ಯವಾದ ಸಮರ್ಪಣೆ ಗೈದರು.ಶ್ರೀ ಶಂಕರದಾಸ ಚಂಡ್ಕಳ ರವರು ಅಂಬೇಡ್ಕರ್ ಗೀತೆಯನ್ನು ಹಾಡಿದರು.ಆಂಗ್ಲಭಾಷಾ ಉಪನ್ಯಾಸಕಿಯಾದ ಶ್ರೀಮತಿ ರೋಹಿಣಿಯವರು ಕಾರ್ಯಕ್ರಮ ನಿರ್ವಹಿಸಿದರು.ಕಾಲೇಜಿನ ವಿದ್ಯಾರ್ಥಿಗಳು,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.