ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವವು ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರ ಗದ್ದಲ, ವಿರೋಧ, ಆಕ್ರೋಶ ಬಹಿಷ್ಕಾರಗಳ ನಡುವೆ ನಡೆಯಿತು.
ಧ್ವಜಾರೋಹಣ ಸುತ್ತೋಲೆ ಕುರಿತು ಸ್ಪಷ್ಟನೆ ನೀಡಿದ ತಹಶೀಲ್ದಾರ್
ಧ್ವಜಾರೋಹಣ ಕುರಿತು ರಾಜ್ಯ ಸರ್ಕಾರದ ನಡೆಯ ವಿರುದ್ದವೂ ಮುಖಂಡರು ಆಕ್ರೋಶ, ಕಾರ್ಯಕ್ರಮದಲ್ಲಿ ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದರ ವಿರುದ್ಧವೂ ಬೇಸರ ವ್ಯಕ್ತಪಡಿಸಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಕನ್ನಡಬಾಷೆ ಉಳಿವಿಗಾಗಿ ಅನೇಕ ಮಹನೀಯರು ಹೋರಾಡಿದ್ದಾರೆ ಅವರನ್ನು ಇಂದಿನ ಯುವ ಪೀಳಿಗೆ ನೆನೆಸುಕೊಳ್ಳುವ ಕೆಲಸ ಮಾಡಬೇಕು ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ಇಡೀ ವರ್ಷಪೂರ್ತಿ ಕನ್ನಡ ದಿನಾಚರಣೆಯನ್ನು ಆಚರಿಸುವಂತಾಗಬೇಕು ಎಂದರು.
ಶ್ರೀನಿವಾಸಪುರ ತಾಲೂಕು ಗಡಿ ಪ್ರದೇಶವಾಗಿದ್ದು, ಅನೇಕ ವಿಷಯಗಳಲ್ಲಿ ಹಿಂದುಳಿದಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ . ಕಳೆದ ೪೫ ವರ್ಷಗಳಿಂದಲೂ ನಿಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ . ನನ್ನ ಮೇಲೆ ವಿಶ್ವಾಸವಿಟ್ಟು ಮತದಾರರು ೫ ನೇ ಬಾರಿ ಗೆಲ್ಲಿಸಿದ್ದೀರಿ. ನಾನು ನಿಮಗೆ ಚಿರಋಣಿ ಎಂದರು. ಆದರೆ ನಾನು ರಾಜಕೀಯದಲ್ಲಿ ಸಂಪಾದನೆ ಮಾಡಲು ಬಂದಿಲ್ಲ, ನಿಮ್ಮ ಸೇವೆಗಾಗಿ ಹಗಲಿರುಲು ಶ್ರಮಿಸುತ್ತೇನೆ ಎಂದರು.
ನನ್ನ ಈ ಚಿಂತನೆಗೆ ಕೆಲವರು ಅಡ್ಡಪಡಿಸುತ್ತಿದ್ದಾರೆ ದಯವಿಟ್ಟು ಈ ಕಾರ್ಯಕ್ಕೆ ಅಡ್ಡಪಡಿಸಬೇಡಿ ಎಂದು ವಿನಂತಿಸಿದರು. ನಾವೆಲ್ಲೂರು ಸೇರಿ ತಾಲೂಕನ್ನ ಅಭಿವೃದ್ಧಿಪಡಿಸೋಣ . ನನ್ನ ಉದ್ದೇಶ ಒಂದೇ ತಾಲೂಕು ರೈತಕುಟುಂಬಗಳು ಆರ್ಥಿಕವಾಗಿ ಸದೃಡಗೊಳಿಸುವುದು, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿ ತಾಲೂಕುನ್ನು ಅಭಿವೃದ್ಧಿಪಡಿಸುವದೇ ನನ್ನ ಉದ್ದೇಶ ಎಂದರು.
ಈವೇಳೆಯಲ್ಲಿ ಕನ್ನಡ ರಾಜ್ಯೋತ್ಸದ ಪ್ರಯುಕ್ತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ, ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಉಪಾಧ್ಯಕ್ಷೆ ಸುನಿತಾ, ಸದಸ್ಯರಾದ ಆನಂದ್, ಎನ್ಎನ್ಆರ್ ನಾಗರಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪುರಸಭೆ ಕಂದಾಯ ನಿರೀಕ್ಷಕ ಎನ್ ಶಂಕರ್, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನ್ನಕೊಳ್ಳ, ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಬಿ.ಆರ್.ಶ್ರುತಿ, ಕೃಷಿ ಸಹಾಯಕ ನಿದೇರ್ಶಕ ಕೆ.ಸಿ.ಮಂಜುನಾಥ್, ಟಿಪಿಒ ವೆಂಕಟಸ್ವಾಮಿ, ಪುರಸಭೆ ನಾಮನಿದೇರ್ಶಕ ಹೇಮಂತ್ ಇದ್ದರು.