ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದವತಿಯಿಂದ ಕನ್ನಡರಾಜ್ಯೋತ್ಸವ

ಶ್ರೀನಿವಾಸಪುರ 1 ; ಆತ್ಮವಿಶ್ವಾಸ, ಶ್ರದ್ದೆ , ಪರಿಶ್ರಮ ಸ್ವಾಲಂಭನೆ ಗುಣಾತ್ಮಕಗಳನ್ನು ರೂಡಿಸಿಕೊಂಡರೆ ಎಂಥಹ ಸಾಮಾನ್ಯ ಮನುಷ್ಯ ಕೂಡ ಸಾಧನೆಯ ಉತ್ತಂಗಕ್ಕೆ ಏರಬಹುದು ಎಂದು ಖ್ಯಾತ ಕಥೆಗಾರ ಕೇಶವರೆಡ್ಡಿ ಹಂದ್ರಾಳರು ಹೇಳಿದರು.
ತಾಲೂಕಿನ ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶಾಲೆಯ 1983-84 ಸಾಲಿನ ಹಳೇ ವಿದ್ಯಾರ್ಥಿಗಳ ಸಂಘದವತಿಯಿಂದ ಕನ್ನಡರಾಜ್ಯೋತ್ಸವ ಪುರಸ್ಕøತ ಸಿ.ಜಿ.ಶ್ರೀನಿವಾಸ್‍ರವರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಅರವತ್ತು, ಎಪ್ಪತ್ತು , ಎಂಬತ್ತರ ದಶಕಳಿಗೆ ಹೋಲಿಸಿದರೆ ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಲ್ಲಿ ಪ್ರತಿಭೆಗಳು ಆರಳುವುದಕ್ಕೆ ಉತ್ತಮವಾದ ವಾತಾವರಣ ಇದೆಯೆಂದು . ಅಂಥ ವಾತಾವರಣವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಮತ್ತು ಯುವ ಜನತೆ ಯಶಸ್ವಿಯಾಗಿ ತಮ್ಮ ಬದುಕಗಳನ್ನು ರೂಪಿಸಿಕೊಳ್ಳಬೇಕೆಂದು ಕರೆನೀಡಿದರು.
ಇಂಥ ಗುಣಗಳಿಂದಾಗಿಯೇ ಕೋಲಾರ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಮಾಸ್ತಿ ವೆಂಕಟೇಶ್ ಅಯ್ಯಾಂಗಾರ್, ಸರ್.ಎಂ.ವಿಶ್ವೇಶ್ವರಯ್ಯ , ಡಿ.ವಿ.ಗುಂಡಪ್ಪ ಮುಂತಾದವರು ಯಶಸ್ಸಿನ ಉತ್ತುಂಗಕ್ಕೆ ಏರಿದರೆಂದರು. ಈ ಸಂದರ್ಭದಲ್ಲಿ ಮಹನೀಯರನ್ನು ಸ್ಮರಿಸಿದರು. ಬಡತನ ಮತ್ತು ಸಂಕಷ್ಟಗಳು ಬದುಕಿನ ಉತ್ಕøಷ್ಟ ಮಾರ್ಗಗಳನ್ನು ಅನ್ವೇಷಣೆ ಮಾಡುತ್ತೇವೆ. ಸಾಮಾನ್ಯ ದಲಿತ ಕುಟುಂಬದಲ್ಲಿ ಹುಟ್ಟಿದ ಮುದಿಮಡುಗು ಗ್ರಾಮದ ಸಿ.ಜಿ.ಶ್ರೀನಿವಾಸ್ ಕನ್ನಡರಾಜ್ಯೋತ್ಸವಕ್ಕೆ ಭಾಜನಾರಾಗಿರುವುದು ಹಿಂದೆ ಪರಿಶ್ರಮ , ಆತ್ಮವಿಶ್ವಾಸ ಅಡಗಿದೆ ಎಂದರು.

ಕನ್ನಡರಾಜ್ಯೋತ್ಸವ ಪುರಸ್ಕøತ ಸಿ.ಜಿ.ಶ್ರೀನಿವಾಸ್ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ನಾವು ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ , ಆ ಓದು ಎಷ್ಟು ಸಂಸ್ಕಾರವನ್ನು ಕಲಿಸಿದೆ ಎಂಬುದು ಮುಖ್ಯ .
ಒಬ್ಬ ವಿದ್ಯಾರ್ಥಿಯು ಎಷ್ಟೇ ವಿದ್ಯಾವಂತರಾದರೂ ಆ ವಿದ್ಯಾರ್ಥಿಯಲ್ಲಿ ತಂದೆತಾಯಿ, ಗುರು , ಹಿರಿಯರಲ್ಲಿ ಗೌರವವನ್ನು ನೀಡುತ್ತಾ, ಮಾನವೀಯ ಮೌಲ್ಯಗಳನ್ನು ಇದ್ದರೆ ಆಗ ಸಮಾಜವು ಗೌರವಿಸುತ್ತದೆ.
ವಿದ್ಯಾರ್ಥಿಗಳು ದೃಡ ನಿರ್ಧಾರ ಇರಬೇಕು. ಸಮಯಪ್ರಜ್ಞೆ ಇರಬೇಕು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಕೌಶಲ್ಯ ಇದ್ದರೆ ಜೀವನದ ಗುರಿಯನ್ನು ಸಾಧಿಸಲು ಸಾಧ್ಯ ಹಾಗೂ ಆದರ್ಶ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಪರಿಸರವಾದಿ ಡಾ|| ಹೆಚ್.ಆರ್. ಸ್ವಾಮಿ ಮಾತನಾಡಿ ಸಮಾಜವನ್ನು ಗೆಲ್ಲಲು ವಿದ್ಯೆಯೊಂದೆ, ವಿದ್ಯಾರ್ಥಿಗಳು ಬದ್ದತೆ, ಜ್ಞಾನ, ಶಿಸ್ತು ,ಸಮಯಪ್ರಜ್ಞೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು.
ವಿದ್ಯಾರ್ಥಿಗಳು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಗಿಡವನ್ನು ದತ್ತು ಪಡೆದು ಪರಿಸರವನ್ನು ಉಳಿಸುವಂತೆ ಕರೆನೀಡಿದರು.
ರಂಗಕರ್ಮಿಗಳಾದ ಎನ್.ಶಿವಲಿಂಗಯ್ಯ, ಅಶೋಕ್, ಕಲಾವಿದ ಮುರಳಿಧರ ವಿ.ರಾಠೋಡ್, ಪ್ರಾಂಶುಪಾಲ ಎನ್.ಶಶಿಕುಮಾರ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಪಿ.ಮಾರಣ್ಣ, ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್ , ನಿವೃತ್ತ ಉಪನ್ಯಾಸಕ ವಿ.ವೆಂಕಟರಮಣ, ಶಾಲೆಯ ಹಳೇ ವಿದ್ಯಾರ್ಥಿಗಳಾದ ಸಿ.ಜಿ.ಶಿವಪ್ಪ, ಸಿಮೆಂಟ್‍ನಾರಾಯಣಸ್ವಾಮಿ, ಮೋಹನ್ ಹಾಗೂ ಉಪನ್ಯಾಸಕರು, ಶಿಕ್ಷಕರು ಇದ್ದರು.

ಸರ್ಕಾರಕ್ಕೆ ಮನವಿ ಮಾಡಿ ರಾಜ್ಯದಲ್ಲಿ ಮೀಸಲಾತಿ ಬೇಕು ಎಂದು ಎಲ್ಲಾ ಸಮುದಾಯಗಳು ಕೇಳುತ್ತಿವೆ. ಆದರೆ ಸರ್ಕಾರವು ಆಯಾ ಸಮುದಾಯಕ್ಕೆ ತಕ್ಕಂತೆ 100ರಷ್ಟು ಮೀಸಲಾತಿ ನೀಡಿದರೆ ಅನುಕೂಲವಾಗಿದೆ ಎಂದು ಪತ್ರಿಕೆಗಳ ಮೂಲಕ ಕನ್ನಡರಾಜ್ಯೋತ್ಸವ ಪುರಸ್ಕøತ ಸಿ.ಜಿ.ಶ್ರೀನಿವಾಸನ್ಸರ್ಕಾರಕ್ಕೆ ಮನವಿ ಮಾಡಿದರು.