JANANUDI.COM NETWORK

ಮಣಿಪಾಲ, ಮಾರ್ಚ್ 21 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಕೊಂಕಣಿ ಸಾಹಿತ್ಯ ಸಮ್ಮೇಳನ- 2021ರ ಪೂರ್ವಭಾವಿ ಮಹಾಸಭೆ ತಾ.24.02.2021 ರ ಬುಧವಾರ ಮಣಿಪಾಲದ ಆರ್.ಎಸ್.ಬಿ. ಸಭಾ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ, ಮಹೇಶ್ ಠಾಕೂರ್ ,ಪ್ರಧಾನ ಸಂಚಾಲಕರಾದ ಪೂರ್ಣಿಮಾ ಸುರೇಶ್ ನಾಯಕ್, ಗೌರವಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಅಕಾಡೆಮಿಯ ಸದಸ್ಯರಾದ ಜೀವನ್ ಪಿಂಟೋ, ಆರ್.ಎಸ್.ಬಿ. ಸಮಾಜದ ಮುಖಂಡ ಉಪೇಂದ್ರ ನಾಯಕ್, ವೈಶ್ಯವಾಣಿ ಸಮಾಜದ ಮುಖಂಡ ವಸಂತ್ ನಾಯಕ್ ಹಾಗೂ ಅಕಾಡೆಮಿಯ ಸದಸ್ಯರಾದ ಮನೋಹರ ಕಾಮತ್ ಉಪಸ್ಥಿತರಿದ್ದರು.
ಅಮೃತ್ ಶೆಣೈ ಸ್ವಾಗತಿಸಿದರು, ಪೂರ್ಣಿಮಾ ಸುರೇಶ್ ಸಮ್ಮೇಳನದ ಮಾಹಿತಿಯನ್ನು ನೀಡಿ, ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಯನ್ನು ನೀಡಿ, ಅಕಾಡೆಮಿಯ ಸದಸ್ಯರಾದ ಮನೋಹರ್ ಕಾಮತ್ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಸಭೆಯಲ್ಲಿ ಕಾರ್ಯಕ್ರಮಗಳ ಸಮಗ್ರ ವಿವರಣೆ, ವಿವಿಧ ಸಮಿತಿಗಳ ರಚನೆ, ಪೂರ್ವ ತಯಾರಿ,ರೂಪುರೇಷೆಗಳ ಇತ್ಯಾದಿಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಂತಹ ಎಲ್ಲಾ ಸಮುದಾಯದ ಕೊಂಕಣೆ ಭಾಷಿಕರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.