NMMS ಪರೀಕ್ಷೆ ಉತ್ತೀರ್ಣರಾದವರಿಗೆ ಸನ್ಮಾನ
2022ರ ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರಕಾರಿ ಪ್ರೌಢಶಾಲೆ, ಕಲ್ಯಾ ಇಲ್ಲಿನ ವಿದ್ಯಾರ್ಥಿಗಳಾದ ಪ್ರಿಯಾ, ಮೋನಿಕಾ, ಶ್ರೇಯಾ.ಜೆ.ಪಿ, ಮಿಥುನ್, ಹಿತೇಶ್ ಇವರನ್ನು ಸನ್ಮಾನಿಸಲಾಯಿತು. ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ, SDMC ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಉಪಾಧ್ಯಾಯ ಹಾಗೂ ಶ್ರೀ ರತ್ನಾಕರ ಹೆಬ್ಬಾರ್ ಇವರು ಉಪಸ್ಥಿತರಿದ್ದರು.
SSLC ಯಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ಸನ್ಮಾನ
2022ರ ಎಪ್ರಿಲ್ ನಲ್ಲಿ ನಡೆದ SSLC ಪಬ್ಲಿಕ್ ಪರೀಕ್ಷೆಯಲ್ಲಿ 616 ಅಂಕ ಗಳಿಸಿ ಕನ್ನಡ ಮಾಧ್ಯಮದಲ್ಲಿ ಕಾರ್ಕಳ ತಾಲೂಕಿನಲ್ಲಿ 5ನೇ ಸ್ಥಾನ ಪಡೆದ ವಿನೀತ್ ಹಾಗೂ ರೇಷ್ಮಾ, 606 ಅಂಕ ಪಡೆದ ಧನ್ಯಾ, 603 ಅಂಕ ಪಡೆದ ಸೃಜಾ ಇವರನ್ನು ಅಮೃತ ಸ್ವಾತಂತ್ಯೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ನಿವೃತ್ತ ಯೋಧರಿಗೆ ಸನ್ಮಾನ
ಅಮೃತ ಸ್ವಾತಂತ್ಯೋತ್ಸವದ ಸಮಾರಂಭದ ದಿನ ನಿವೃತ್ತ ಯೋಧ ಬೇಲಾಡಿ ಶ್ರೀ ರತ್ನಾಕರ ಹೆಬ್ಬಾರ್ ಇವರನ್ನು ಸನ್ಮಾನಿಸಲಾಯಿತು
ಕು/ ಅಕ್ಷಿತಾ ಹೆಗ್ಡೆಗೆ ಸನ್ಮಾನ
ಮಂಕುತಿಮ್ಮನ ಕಗ್ಗದ 13 ಹಾಡುಗಳನ್ನು ಕನ್ನಡ ಕೈ ಬರಹದಲ್ಲಿ ಬರೆದು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ತನ್ನ ಹೆಸರು ಮುದ್ರಿಸಿದ ಸರಕಾರಿ ಪ್ರೌಢಶಾಲೆ, ಕಲ್ಯಾದ ಹಳೆ ವಿದ್ಯಾರ್ಥಿನಿ ಕು/ ಅಕ್ಷಿತಾ ಹೆಗ್ಡೆ ಇವರನ್ನು ಅಮೃತ ಸ್ವಾತಂತ್ಯೋತ್ಸವದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ತಾಲೂಕು ಖೋ-ಖೋ ಪಂದ್ಯಾಟ
ದಿನಾಂಕ 18-08-2022 ರಂದು ತಾಲೂಕು ಮಟ್ಟದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟವು ಸರಕಾರಿ ಪ್ರೌಢಶಾಲೆ, ಕಲ್ಯಾ ಇಲ್ಲಿ ನಡೆಯಿತು. ಇಲ್ಲಿನ ಬಾಲಕರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ, ಸದಸ್ಯರಾದ ಶ್ರೀಮತಿ ಪ್ರೇಮ ಪೂಜಾರಿ ಹಾಗೂ ಶ್ರೀ ಜಗದೀಶ್ ಆಚಾರ್ಯ, SDMC ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ರಾಮಚಂದ್ರ ಕಾರಂತ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಜೈನ್, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಶ್ರೀ ರಾಜಾರಾಮ ಶೇರ್ವೇಗಾರ್ ಉಪಸ್ಥಿತರಿದ್ದರು