JANANUDI.COM NETWORK
ಕಲಬುರಗಿ ,ಮೇ.4 : ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ೨೪ ಜನರ ದುರ್ಮರಣದ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲಿಯೂ ಇಂತಹದೇ ದುರಂತ ಸಂಭವಿಸಿದೆ. ಆಕ್ಸಿಜನ್ ಸಿಗದೆ ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಭೀಕರ ಘಟನೆ ಕಲಬುರಗಿಯ ಅಫಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಮುಂಜಾನೆ 4 ಗಂಟೆಗೆ ಆಕ್ಸಿಜನ್ ಕೊರತೆ ಎದುರಾಗಿದ್ದು. ಆದರೆ ಬೆಳಗ್ಗೆ 11 ಗಂಟೆ ಸಮೀಪಿಸುತ್ತಾ ಬಂದಿದ್ದರೂ ಕೂಡ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿಲ್ಲ. ಇದರಿಂದಾಗೊ ರೋಗಿಗಳು ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ.
ಅಫಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ಇನ್ನೂ 32 ಮಂದಿ ರೋಗಿಗಳು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ 32 ರೋಗಿಗಳು ಕೂಡ ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ