ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಶಾಲತಾ ಶೆಟ್ಟಿ,ಉಪಾಧ್ಯಕ್ಷರಾಗಿ ರಾಮಚಂದ್ರ ನಾವಡ

JANANUDI.COM NETWORK


ಕುಂದಾಪುರ,ಫ್ರೆ.18; ಕಾಳಾವರ ಗ್ರಾಮ ಪಂಚಾಯತಿಯ ಪ್ರಥಮ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ವಕ್ವಾಡಿ ಆಶಾಲತ ಶೆಟ್ಟಿ, ಉಪಾಧ್ಯಕ್ಷರಾಗಿ ರಾಮಚಂದ್ರ ನಾವಡ ಸಿಪಿಎಮ್ ಬೆಂಬಲಿತರಾದ ರಾಮಚಂದ್ರ ನಾವಡ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.18 ರಂದು ನಡೆಯಿತು. ಇಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷನ ಸ್ಥಾನ ಸಾಮನ್ಯಕ್ಕೆ ಮೀಸಲಾಗಿತ್ತು. ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ಕುಸುಮಾಕರ ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಒಟ್ಟು 17 ಸದಸ್ಯರ ಬಲ ಹೊಂದಿರುವ ಕಾಳಾವರ ಗ್ರಾಮ ಪಂಚಾಯತಿಲ್ಲಿ 7 ಕಾಂಗ್ರೆಸ್ ಬೆಂಬಲಿತರು, 5 ಬಿಜೆಪಿ ಬೆಂಬಲಿತರು 4 ಸಿಪಿಎಮ್ ಬೆಂಬಲಿತರು, ಹಾಗೂ 1 ಪಕ್ಷೇತರರಾಗಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ರಮೇಶ ಶೆಟ್ಟಿ, ರವಿರಾಜ್ ಶೆಟ್ಟಿ, ಶರತ್ ಶೆಟ್ಟಿ ವಿನೋದ್ ಕ್ರಾಸ್ತಾ, ದೀಪಕ್ ಕುಮಾರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರೋಶನ್ ಶೆಟ್ಟಿ, ಸಿಪಿಎಮ್.ಮುಖಂಡರದ ಯು. ದಾಸ ಭಂಡಾರಿ, ಎಚ್. ನರಸಿಂಹ ಮೊದಲಾದದವರು ಉಪಸ್ಥಿತರಿದ್ದರು
.