ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಕೈವಾರ ಯೋಗಿನಾರೇಯಣ ಯತೀಂದ್ರರು ತಮ್ಮ ಕಾಲ ಜ್ಞಾನದ ಮೂಲಕ ಪ್ರಸಿದ್ಧರಾಗಿದ್ದಾರೆೆ ಎಂದು ತಾಲ್ಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಲ್.ರಾಮಣ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಏರ್ಪಡಸಿದ್ದ ಕೈವಾರ ಯೋಗಿನಾರಾರೇಯಣ ಯಂತೀದ್ರರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ತಾತಯ್ಯನವರ ಕೀರ್ತನೆಗಳು ಈ ಭಾಗದ ಜನರ ನಾಲಿಗೆಯ ಮೇಲೆ ನಲಿದಾಡುತ್ತಿವೆ. ತಾತಯ್ಯನವರ ಕೀರ್ತನೆಗಳನ್ನು ಹಾಡುವುದು ಒಂದು ಪರಂಪರೆಯಾಗಿ ಮುಂದುವರಿದಿದೆ ಎಂದು ಹೇಳಿದರು.
ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಕಲಾ ಶಂಕರ್ ಮಾತನಾಡಿ, ತಾತಯ್ಯ ಎಂದು ಹೆಸರಾಗಿರುವ ಕೈವಾರ ನಾರಾಯಣಪ್ಪ ಅವರ ಕಾಲಜ್ಞಾನ, ಕಾಲಾಂತರದಲ್ಲಿ ನಿಜವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೀರ್ತನಕಾರರಾಗಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಚಿಸಿರುವ ಕೀರ್ತನೆಗಳು ಸಾಮಾನ್ಯ ಜನರ ಹೃದಯದಲ್ಲಿ ನೆಲೆಯೂರಿವೆ. ಖ್ಯಾತ ಸಂಗೀತಗಾರರು ಹಾಡಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಮನೋಹರ ಮಾನೆ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಬಣಜಿಗ ಸಮುದಾಯದ ಮುಖಂಡರಾದ ಬಿ.ಎಲ್.ಸೂರಣ್ಣ, ಬಿ.ಎಲ್.ಪ್ರಕಾಶ್, ಕೃಷ್ಣಮೂರ್ತಿ, ಭಾಸ್ಕರ್, ಮುರಳಿ, ಶ್ರೀನಿವಾಸ್, ಎಲ್.ವಿ.ಗೋವಿಂದಪ್ಪ, ಶ್ರೀನಿವಾಸಯ್ಯ, ವಿಜಯ ಭಾಸ್ಕರ್, ಗುರುಪ್ರಸಾದ್, ರಘು, ಹೂಗಳಗೆರೆ.ಎ.ಹರೀಶ್. ಅರ್.ನಾರಾಯಣಸ್ವಾಮಿ, ತಹಶೀಲ್ದಾರ್ ಮನೋಹರ ಮಾನೆ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಇದ್ದರು.