

ಕೋಲಾರ,ಮಾ.28: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡ ಮಾಡುವ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ದತ್ತಿನಿಧಿ ಪ್ರಶಸ್ತಿಗೆ ಕೋಲಾರಶಕ್ತಿ ದಿನಪತ್ರಿಕೆಯ ಸಂಪಾದಕರಾದ ಕೆ.ಗೋಪಿಕಾಮಲ್ಲೇಶ್ ಹಾಗೂ ಡಿ.ವಿ.ಜಿ ದತ್ತಿನಿಧಿ ಪ್ರಶಸ್ತಿಗೆ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷರೂ ಆದ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮದ ವಿ.ವೆಂಕಟೇಶ್ ಭಾಜನರಾಗಿದ್ದಾರೆ.
ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಫಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ಕೋಲಾರಶಕ್ತಿ ದಿನಪತ್ರಿಕೆಯ ಸಂಪಾದಕರಾದ ಕೆ.ಗೋಪಿಕಾಮಲ್ಲೇಶ್ ಹಾಗೂ ಡಿ.ವಿ.ಜಿ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷರೂ ಆದ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮದ ವಿ.ವೆಂಕಟೇಶ್ ಅವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ಕುಮಾರ್ ಅಭಿನಂದನೆಗಳನ್ನು ತಿಳಿಸಿದ್ದಾರೆ.