ಕುಂದಾಪುರ,ಡಿ29; 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಉಡುಪಿ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29 ರಂದು ಭಾನುವಾರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಜುಬಿಲಿ ವರ್ಷಕ್ಕೆ ಡಿಸೆಂಬರ್ 24 ರಂದು ವ್ಯಾಟಿಕನ್ ನಲ್ಲಿ ಜಗದ್ಗುರು ಪೋಪ್ ಜಗದ್ಗುರು ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉದ್ಘಾಟನೆ ಮಾಡಿದ್ದು ಅದರ ದ್ಯೋತಕವಾಗಿ ವಿಶ್ವದ ಎಲ್ಲಾ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29ರಂದು ಆಯಾ ಕ್ಯಾಥೆಡ್ರಲ್ ಗಳ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಚಾಲನೆ ನೀಡಲಾಯಿತು, ಅದರಂತೆ ಕುಂದಾಪುರ ಅತ್ಯಂತ ಹಿರಿಯ ಚರ್ಚ್ ಆದ ಹೋಲಿ ರೋಜರಿ ಚರ್ಚಿನಲ್ಲಿ ಶಿಲುಭೆಯನ್ನು ಆಶಿರ್ವದಿಸಿ ಪ್ರತಿಷ್ಠಾಪಿಸುವ ಮೂಲಕ ಅ।ವಂ।ಧರ್ಮಗುರು ಪೌಲ್ ರೇಗೊ ಉದ್ಘಾಟಿಸಿ ಜುಬಿಲಿ ವರ್ಷಕ್ಕೆ ಚಾಲನೆ ನೀಡಿದರು.
ಪ್ರತಿಷ್ಠಾಪಿಸಿದ ಶಿಲುಭೆ ವರ್ಷವೀಡಿ ಅಲ್ಲಿಯೆ ಇದ್ದು, ವರ್ಷಂಪೂರ್ತಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಣೆ ನೀಡಿದರು, ಮತ್ತೊಂದು ಶಿಲುಭೆಯನ್ನು ಆಶಿರ್ವಾದಿಸಿದ, ಆ ಶಿಲುಭೆ ಕುಂದಾಪುರ ಚರ್ಚಿನ ಎಲ್ಲಾ ಕುಟುಂಬಗಳ ಮನೆಗೆ ದಿನಕ್ಕೆ ಒಂದರಂತೆ ಎಲ್ಲಾ ಮನೆಗಳಿಗೆ ಶಿಲುಭೆಯನ್ನು ಕೊಂಡಯ್ದು ಪ್ರಾರ್ಥನಾ ವಿಧಿಗಳನ್ನು ನೆಡಸಲಾಗುವುದು’ ಎಂದು ತಿಳಿಸಿ ಮೊದಲ ದಿನಕ್ಕಾಗಿ ಸಂತ ಜೋಸೆಫ್ ಕಾನ್ವಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯರವರಿಗೆ ಧರ್ಮಗುರುಗಳು ಹಸ್ತಾಂತರಿಸಿದರು. ಬಳಿಕ ಎಲ್ಲಾ ಕುಂಟುಂಬಗಳಿಗೆ ಆ ಶಿಲುಭೆಯನ್ನು ಕೊಂಡಯ್ಯಲಾಗುವುದು.
ಇದೇ ದಿನಂದಂದು ಯೇಸು, ಮೇರಿಮಾತೆ ಮತ್ತು ಸಂತ ಜೋಸೆಫ್ ಇವರ ಪವಿತ್ರ ಕುಟುಂಬದ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.