

ಕೋಲಾರ,ಏ.01: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡ ಮಾಡುವ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಕೋಲಾರಶಕ್ತಿ ದಿನಪತ್ರಿಕೆಯ ಸಂಪಾದಕರಾದ ಕೆ.ಗೋಪಿಕಾಮಲ್ಲೇಶ್ ಹಾಗೂ ಡಿ.ವಿ.ಜಿ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷರೂ ಆದ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮದ ವಿ.ವೆಂಕಟೇಶ್ ಅವರು ಇಂದು ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜು ಆವರಣ ಡಾ.ಬಿ.ವಿ.ವೈಕುಂಠರಾಜು ವೇದಿಕೆಯಲ್ಲಿ ನಡೆದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ಎಂ.ವಾಸುದೇವಹೊಳ್ಳ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಲಕ್ಷ್ಮಣ್, ಶ್ರೀನಾಥ್ ಉಪಸ್ಥಿತರಿದ್ದರು.