ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ದಶಕದ ಹಿಂದೆ ದಿವಾಳಿಯಾಗಿ ಅಧಃಪತನ ಕಂಡಿದ್ದ ಡಿಸಿಸಿ ಬ್ಯಾಂಕ್‌ನ ಇಂದಿನ ಪ್ರಗತಿಗೆ ಪತ್ರಕರ್ತರ ಸಹಕಾರ ಅಮೂಲ್ಯ ಬ್ಯಾಲಹಳ್ಳಿಗೋವಿಂದಗೌಡ
ಕೋಲಾರ : ಕಳೆದೊಂದು ದಶಕದ ಹಿಂದೆ ದಿವಾಳಿಯಾಗಿ ಅಧಃಪತನ ಕಂಡಿದ್ದ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇಂದು ರಾಜ್ಯದಲ್ಲೇ ನಂ .೧ ಸ್ಥಾನಕ್ಕೇರಲು ಜಿಲ್ಲೆಯ ಪತ್ರಕರ್ತರು ನೀಡಿದ ಸಹಕಾರ ಅಮೂಲ್ಯವಾದುದು ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಪತಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತಕರ್ತರ ಸಂಘ , ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘಗಳ ಆಶ್ರಯದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಕ್ಯಾಲೆಂಡರ್ ಹಾಗೂ ಡೈರಿ ವಿತರಿಸಿ ಅವರು ಮಾತನಾಡುತ್ತಿದ್ದರು. ಯಾವೂದೇ ಸಂಸ್ಥೆಗಳ ಬೆಳವಣಿಗೆಗೆ ಪತ್ರಿಕಾ ರಂಗದ ಸಹಕಾರ ಅತ್ಯಗತ್ಯವಾಗಿದೆ ಎಂಬುವುದಕ್ಕೆ ನಮ್ಮ ಡಿಸಿಸಿ ಬ್ಯಾಂಕ್ ಉತ್ತಮ ನಿದರ್ಶನವಾಗಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಡಿಸಿಸಿ ಬ್ಯಾಂಕ್‌ಗೆ ಕನಿಷ್ಠ ಪೇಪರ್ , ಪೆನ್ನು ನೀಡಲಾಗದ ಹೀನಾಯ ಸ್ಥಿತಿ ಇತ್ತು . ಬ್ಯಾಂಕಿನ ಆಡಳಿತವನ್ನು ನಾನು ವಹಿಸಿ ಕೊಂಡ ನಂತರ ಪತ್ರಿಕಾ ರಂಗದ ಸಹಕಾರದಿಂದ ಡಿಸಿಸಿ ಬ್ಯಾಂಕ್ ಸಾರ್ವಜನಿಕವಲಯದಲ್ಲಿ ಮರುಜನ್ಮ ಪಡೆದು ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕಿದ ಎಂದರು.
ಸಮಾಜದಲ್ಲಿನ ಲೋಪದೋಷಗಳನ್ನು ತಿದ್ದಿ ಶೋಷಿತವರ್ಗಕ್ಕೆ ಬೆಳಕು ತೋರುವ ಪ್ರಮುಖ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದ ಅವರು , ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಕೆಲಸ ಎಂದಿಗೂ ಮಾಡದಿರಿ ಎಂದು ಕಿವಿಮಾತು ಹೇಳಿದರು.
ಇಂದು ಪತ್ರಿಕೆಗಳು ನಡೆಸುವುದು ಸುಲಭದ ಮಾತಲ್ಲ. ಏಕೆಂದರೆ ನಾನು ಸಹ ಒಂದು ಪತ್ರಿಕೆ ನಡೆಸುತ್ತಿರುವುದರಿಂದ ನನಗೂ ಅನುಭವವಿದೆ , ವೃತ್ತಿ ಗೌರವವನ್ನು ಕಾಪಾಡಿ ಕೊಂಡು ಪತ್ರಿಕೆಗಳು ಮುನ್ನಡೆಯುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ ಮಾತನಾಡಿ , ಪತ್ರಿಕಾ ಕ್ಷೇತ್ರವು ಇಂದು ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿದೆ. ಡಿಸಿಸಿ ಬ್ಯಾಂಕಿಗೆ ಗೋವಿಂದೇಗೌಡರು ಅಧ್ಯಕ್ಷರಾದ ಮೇಲೆ ಪತ್ರಿಕೆಗಳು ಹೆಚ್ಚು ಸಹಕಾರ ನೀಡಿ , ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ನೀಡಿದ ಕೊಡುಗೆ ಅಪಾರ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ . ಮುನಿರಾಜು ಮಾತನಾಡಿ , ಪತ್ರಕರ್ತರ ಸಂಘ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ಎರಡೂ ಪ್ರಗತಿ ಸಾಧಿಸಿದೆ . ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ನಂ ಓನ್ ಸ್ಥಾನಗಳಿಸಿದಂತೆ ಜಿಲ್ಲಾ ಪತಕರ್ತರ ಸಂಘದ ಕಟ್ಟಡವು ರಾಜ್ಯದಲ್ಲೇ ನಂ ಓನ್ ಸ್ಥಾನ ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೆಮ್ಮೆಯಿಂದ ನುಡಿದರು.
ಗೋವಿಂದೇಗೌಡರು ಅಧ್ಯಕ್ಷರಾದ ಮೇಲೆ ಡಿಸಿಸಿ ಬ್ಯಾಂಕ್ ಎರಡು ಜಿಲ್ಲೆಗಳಲ್ಲಿ ಮನೆಮನೆಯ ಮಾತಾಗಿದೆ . ರೈತರಿಗೆ ಎಕರೆಗೆ ಕನಿಷ್ಟ ೫ ರಿಂದ ೧೦ ಲಕ್ಷ ಸಾಲ ವಿತರಿಸುವಂತಾಗಲಿ ಎಂದು ಜಿಲ್ಲೆಯ ರೈತರ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು .ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ , ಬ್ಯಾಲಹಳ್ಳಿ ಗೋವಿಂದೇಗೌಡರಿಗೂ ಮತ್ತು ಪತ್ರಕರ್ತರಿಗೂ ಕಳೆದ ೩೦ ವರ್ಷಗಳ ಅವಿನಾಭಾವ ಸಂಬಂಧವಿದೆ , ಅನೇಕ ಪತ್ರಿಕೆಗಳಿಗೆ ಗೋವಿಂದಗೌಡರೇ ಕಷ್ಟ ಕಾಲದಲ್ಲಿ ಜಾಹಿರಾತು ನೆರವು ನೀಡುವ ಮೂಲಕ ಜೀವಂತಗೊಳಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎ೦ದರು .
ಕಳೆದ ೨೫ ವರ್ಷಗಳ ಹಿಂದೆ ಬ್ಯಾಲಹಳ್ಳಿಯಲ್ಲಿ ೨೦ ವರ್ಷಗಳಿಗೊಮ್ಮೆ ನಡೆಯುವ ಕುರುಬರ ದ್ಯಾವರದಲ್ಲಿ ಪತ್ರಕರ್ತರಿಗೆ ಆತ್ಮೀಯರಾದ ಗೋವಿಂದಗೌಡರು , ಗೋವಿಂದಗೌಡರು ಮುಂದಿನ ದ್ಯಾವರ ನಡೆಯುವ ವೇಳೆಗೆ ಕೋಲಾರ ಶಾಸಕರಾಗುವ ಮೂಲಕ ಉನ್ನತ ಸ್ಥಾನ ಪಡೆಯಲಿ ಎಂದು ಹಾರೈಸಿದರು . ವೇದಿಕೆಯಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್ , ಜಿಲ್ಲಾ ಕಾರ್ಯನಿರತ ಪತಕರ್ತರ ಸಂಘದ ಪಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ , ಉಪಸ್ಥಿತರಿದ್ದು , ವಿಜಾಂಜಿ ಎ.ಜಿ. ಸುರೇಶ್ ಕುಮಾರ್ ಸ್ವಾಗತಿಸಿ ನಿರೂಪಿಸಿದ್ದು , ಹಿರಿಯ ಪತ್ರಕರ್ತರಾದ ಸಚ್ಚಿದಾನಂದ , ರಾಘವೇಂದ , ಜಗದೀಶ್ , ರಾಜೇಂದ್ರ , ರವಿ , ಬಾಬಾ , ಮುರಳಿಧರ್ , ಸಿ.ಜಿ.ಮುರಳಿ ಮತ್ತಿತರರಿದ್ದರು .Attachments area