ಜೊಸೇಫ್ ಫೆರ್ನಾಂಡಿಸ್ ಹೇರಿಕುದ್ರು – ನಿಧನ

JANANUDI.COM NETWORK


ಕುಂದಾಪುರ, ಫೆ.7: ಮೂಲತ ಹೇರಿಕುದ್ರು ನಿವಾಸಿ, ನಿವ್ರತ್ತ ಮೀನುಗಾರಿಕಾ ಬಂದರು ಅಧಿಕಾರಿ ಜೊಸೇಫ್ ಫೆರ್ನಾಂಡಿಸ್ (81) ಅಲ್ಪ ಕಾಲದ ಅಸೌಖ್ಯದಿಂದ ಉಡುಪಿ ಮೂಡುತೊನ್ಸೆಯ ಪುತ್ರನ ಗ್ರಹದಲ್ಲಿ ಫೆಬ್ರವರಿ 6 ರಂದು ನಿಧನರಾದರು.
ಇವರು ಗಂಗೊಳ್ಳಿ, ಮಲ್ಪೆ, ಹಂಗಾರಕಟ್ಟೆ ಮುಂತಾದ ಮೀನುಗಾರಿಕಾ ಬಂದರುಗಳಲ್ಲಿ ಸೇವೆ ಸಲ್ಲಿಸಿದ್ದರು. ಸೌಮ್ಯ ಸ್ವಭಾವದ ಅವರು ದಕ್ಷ ಅಧಿಕಾರಿಯಾಗಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮ್ರತರು ಪತ್ನಿ, ಮೂವರು ಪುತ್ರರರು ಒರ್ವ ಪುತ್ರಿ ಮತ್ತು ಅಪಾರ ಬಂಧು ಮಿತ್ರರರನ್ನು ಅಗಲಿದ್ದಾರೆ.