

ಕೋಡಿ ಹಾಜಿ ಕೆ ಮೊಹಿದ್ದಿನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ,ರಾಜ್ಯ ಸಂಪನ್ಮೂಲ ವ್ಯಕ್ತಿ ಕಂದಾವರ ಜಯಶೀಲ ಶೆಟ್ಟಿ ಅವರಿಗೆ ಶಿಕ್ಷಣ ಜ್ಞಾನ ಪತ್ರಿಕೆ ಕೊಡಮಾಡುವ ಪ್ರತಿಷ್ಠಿತ ಜ್ಞಾನ ಸಿಂಧು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರಸ್ತುತ ಇವರು ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಯನ್ನು ಡಿ.17ರಂದು ಶನಿವಾರ ಹೊಸದುರ್ಗದಲ್ಲಿ ನಡೆಯವ ಪತ್ರಿಕೆ ರಾಜ್ಯ ಸಮಾವೇಶದಲ್ಲಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.