
ಬೆಳಗಿನ ಹೊತ್ತಿನಲ್ಲಿ ಕಶ್ಟ ಯಾತನೆಯ ಶಿಲುಭೆ ಪಯಣ

ಕುಂದಾಪುರ ಎ.8: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜಾಞಪಿಸಿ ಪ್ರಾರ್ಥನೆ ಮೂಲಕ ನೇರವೆರಿಸಿದರು
ಸಂಜೆ ಇಗರ್ಜಿಯ ಒಳಗಡೆ ಯೇಸುವಿನ ಕಷ್ಟ ಮರಣದ ಧಾರ್ಮಿಕ ವಿಧಿ

ಸಂಜೆ ಪುನ: ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಗೌರವ ಪೂರ್ವಕ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ಯೇಸುವಿನ ಕಶ್ಟ ಮರಣದ ಧಾರ್ಮಿಕ ವಿಧಿಗಳನ್ನು ನಡೇಸಲಾಯಿತು.
ಸಂಜೆಯ ಪ್ರಾರ್ಥನ ವಿಧಿಗಳನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಧರ್ಮಗುರು ವಂ| ಜೊಸ್ವಿ ಡಿಸೋಜಾ ನೆಡೆಸಿಕೊಟ್ಟು ’ಪ್ರಿಯರೆ ನಮಗೆ ಒಂದಲ್ಲು ಒಂದು ಸಲ ದೇವರು ಇದ್ದಾನೇಯೆ ಎಂಬ ಅನುಮಾನ ಬಂದೇ ಬರುತ್ತೆ, ಸಂತರಲ್ಲಿಯೂ ಈ ಚಿಂತನೆ ಬರುತ್ತೆ. ನಮ್ಮ ಕಷ್ಟಕಾಲದಲ್ಲಿ, ನಾವು ಎಕಾಂಗಿಯಾದಾಗ, ಅನಾಥ ಪ್ರಜ್ಞೆ ಮೂಡಿದಾಗ ಇಂತಹ ಆಲೋಚನೆಗಳು ಬರುವುದು ಸಹಜ, ಇದು ತಾತ್ಕಾಲಿಕ, ಅಂತ್ಯದಲ್ಲಿ ನಮ್ಮ ಸತ್ಯದ ಜಿವಿತಕ್ಕೆ ಫಲ ಸಿಗುವುದು, ನಾವು ಮಾಡಿದ ಫಲವಾಗಿ ಯೇಸು ಕ್ರಿಸ್ತರು ಅವರ ಕೊನೆ ಕಾಲದಲ್ಲಿ, ಗೆತ್ಸೆಮನೆ ತೋಪಿನಲ್ಲಿ ಪ್ರಾರ್ಥಿಸುವಾಗ ಭಯಂಕರ ವೇದನೆ ಅನುಭವಿಸಿದರು, ಅವರಲ್ಲಿ ನೆತ್ತರಿನಿಂದ ಬೆವರಿದರು, ಶತ ಶತಮಾನದಿಂದಲೂ, ಯುಗಳಿಂದಲೂ ಮಾನವನು ಮಾಡಿ ಬಂದಿರುವ ಪಾಪ ಕ್ರತ್ಯಗಳು ಅವರ ಮುಂದೆ ಬಂದವು, ಅವರ ಪಾಪ ವಿಮೋಚನೆಗೆ ನೀನು ಬಲಿಪಶುವಾಗಬೇಕು, ಎಂಬುದು ದೇವರ ಯೋಜನೆ ಎಂದು ತಿಳಿದು ಬಂದು, ತಾನು ಶಿಲುಭೆಗೇರಿ ಪ್ರಾಣ ಬಲಿದಾನ ಅರ್ಪಿಸಲು ದೇವರ ಆಣತಿಯಂತೆ ಸಿದ್ದರಾದರು, ಮುಂದೆ ಆತನ ಶಿಸ್ಯ ಜುದಾಸನು ಯೇಸುವನ್ನು ಹಿಡಿದುಕೊಟ್ಟು ದೇವರ ಯೋಜನೆಗೆ ಅನುವು ಮಾಡಿಕೊಡುತ್ತಾನೆ, ಮುಂದೆ ಯೇಸು ನಮಗಾಗಿ ಪಟ್ಟ ಯಾತನೆ, ಚಿತ್ರಹಿಂಸೆ ಅಷ್ಟಿಸ್ಟಲ್ಲ, ಅವರ ದೇಹದ ಎಲ್ಲಾ ಭಾಗಗಳು ಛಾಟಿ ಯೇಟು, ಮುಷ್ಟಿ ಪೆಟ್ಟು, ಒದೆತದಿಂದ ದೇಹದೆಲ್ಲಡೆ ರಕ್ತ ಒಸರುತಿತ್ತು. ಆಗ ಮಧ್ಯಾನ್ನದ 3 ಗಂಟೆ, ವಾಡಿಕೆಯಂತೆ ಬೆಳಕಿರಬೇಕಿತ್ತು, ಆದರೆ ಯೇಸು ಶಿಲುಭೆಗೇರಿಸಿದ ನಾಡಿನಲ್ಲಿ ಕತ್ತಲಾವರಿಸಿತು, ಯೇಸು ಸ್ವಾಮಿ ಇನ್ನೂ ಯಾತನೆ ಅನುಭವಿಸಲಾರದೆ ನನ್ನ ದೇವರೆ ನನ್ನ ದೇವರೆ ನನ್ನೇಕೆ ಕೈ ಬಿಟ್ಟಿದ್ದಿರಿ ಎಂದು ಕೂಗಿಹೊಂಡರು, ಸೈನಿಕರೆಲ್ಲ ಗೇಲಿ ಮಾಡಿದರು, ಆದರೆ ಯೇಸು ಮತ್ತೊಮ್ಮೆ ಗಟ್ಟಿಯಾಗಿ ಕೂಗಿಕೊಂಡರು ಆಗ ಭೂಮಿ ನಡುಗಿತು, ದೇವಾಲಯ ಪರದೆ ಇಬ್ಬಾಗವಾಗಿ ಸೀಳಿ ಹೋಗಿತು, ಬಂಡೆಕಲ್ಲುಗಳು ಸಿಡಿದವು, ಸಮಾಧಿಗಳು ತೆರೆದುಕೊಂಡು, ನಿಧನ ಹೊಂದಿದ ಅನೇಕ ಜನರು ಆ ಸಮಾಧಿಗಳಿಂದ ಹೊರ ಬಂದರು, ಈ ರೀತಿಯ ಯೇಸುವಿನ ಮರಣ ನೋಡಿ ಯೇಸುವನ್ನು ಶಿಲುಭೆಗೇರಿಸುವ, ಸಿನಿಕರು ಮತ್ತು ಹೊಣೆ ಹೊತ್ತ ಶತಾಧಿಪತಿ ಭಯಬ್ರಾಂತನಾಗಿ ಸತ್ಯವಗಿಯೂ ಈತ ದೇವರ ಪುತ್ರನೇ ಸರಿ ಎಂದು ಅವನ ನಾಲಗೆಯಿಂದ ಮಾತುಗಳು ಹೊರ ಬಂದವು. ಹೀಗೆ ನಮಗಾಗಿ ನಮನ್ನು ಪಾಪ ವಿಮೋಚನೆಗಾಗಿ ಯೇಸುವು ತಮನ್ನು ಬಲಿದಾನ ಅರ್ಪಿಸಿದರು’ ಎಂದು ಅವರು ಸಂದೇಶ ನೀಡಿದರು.
ಈ ಪ್ರಾರ್ಥನಾ ವಿಧಿಗಳಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಭಾಗಿಯಾದರು. ಈ ಶುಭ ಶುಕ್ರವಾರದ ಧಾರ್ಮಿಕ ವಿಧಿಯಲ್ಲಿ ಹಲವಾರು ಜನಸಾಮಾನ್ಯರು ಭಾಗಿಯಾದರು. ಈ ಶ್ರದ್ದಾ ಭಕ್ತಿಪೂರ್ವಕ ಆಚರಣೆಯಲ್ಲಿ ಧರ್ಮ ಭಗಿನಿಯರು, ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಂಡರು.








































