ಬೆಳಗಿನ ಹೊತ್ತಿನಲ್ಲಿ ಕಶ್ಟ ಯಾತನೆಯ ಶಿಲುಭೆ ಪಯಣ
ಕುಂದಾಪುರ ಎ.8: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜಾಞಪಿಸಿ ಪ್ರಾರ್ಥನೆ ಮೂಲಕ ನೇರವೆರಿಸಿದರು.
ಸಂಜೆ ಇಗರ್ಜಿಯ ಒಳಗಡೆ ಯೇಸುವಿನ ಕಷ್ಟ ಮರಣದ ಧಾರ್ಮಿಕ ವಿಧಿ
ಸಂಜೆ ಪುನ: ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಗೌರವ ಪೂರ್ವಕ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ಯೇಸುವಿನ ಕಶ್ಟ ಮರಣದ ಧಾರ್ಮಿಕ ವಿಧಿಗಳನ್ನು ನಡೇಸಲಾಯಿತು.
ಸಂಜೆಯ ಪ್ರಾರ್ಥನ ವಿಧಿಗಳನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಧರ್ಮಗುರು ವಂ| ದೀಪ್ ಫೆರ್ನಾಂಡಿಸ್ ನೆಡೆಸಿಕೊಟ್ಟು ’ಯೇಸುವಿನ ಗಾಯಗಳಿಂದ ನಾವು ಗುಣ ಹೊಂದಿದೆವು ಎಂದು ನಾವು ನೆನಪಿಟ್ಟುಕೊಳ್ಳಬೇಕು. ನಾವು ಸಾಮಾನ್ಯವಾಗಿ ಮಾಡುವ ಪಾಪಗಳು ಮಾತ್ರ ನಮಗೆ ತಿಳಿದಿರುತ್ತವೆ, ಆದರೆ ನಮಗೆ ತಿಳಿಯದಂತೆ ನಾವು ಅನೇಕ ಪಾಪಗಳನ್ನು ಮಾಡುತ್ತೇವೆ, ಪರರಿಗೆ ಒಳಿತನ್ನು ಉಂಟು ಮಾಡದಂತೆ ಮಾಡುವುದು, ತಡೆಯುವುದು, ಬೇರೆಯವರು ಕಶ್ಟದಲ್ಲಿರುವರಿಗೆ ಸಹಾಯ ಮಾಡದೆ ಇರುವುದು, ಹಸಿದಾಗ ಹೊಟ್ಟೆಗೆ ಕೊಡದೆ ಇರುವುದು, ಇತರರರಿಗೆ ಒಳಿತನ್ನು ಬಯಸದೇ ಇರುವುದು, ಮನಸಿನಲ್ಲಿ ದೇವರನ್ನು ಅನುಮಾನಿಸುವುದು ಇಂತಹ ನಡೆಗಳು ಕೂಡ ಪಾಪಗಳಾಗಿವೆ.” ಎಂದು ಹೇಳುತ್ತ ’ಯೇಸು ನಮಗೆ ಹೇಳಿದ್ದಾರೆ, ನಾನು ನಿನ್ನನ್ನು ಪ್ರೀತಿಸುವಂತೆ, ನೀನು ಪರರನ್ನು ಪ್ರೀತಿಸಬೇಕು. ನಮ್ಮ ಪಾಪಗಳಿಗಾಗಿ ಯೇಸು ಸ್ವಾಮಿ ಶಿಲುಭೆಯ ಮರಣ ಹೊಂದಿದರು, ೨೦೦೦ ಸಾವಿರ ವರ್ಷಗಳ ಹಿಂದೆ ಶಿಲುಭೆಯು ಅತ್ಯಂತ ಅಸಯ್ಯ ಹೀನಯಾವಾದ ಸಂಕೇತವಾಗಿತ್ತು, ಯೇಸು ಶಿಲುಭೆಯ ಮೇಲೆ ಮರಣ ಹೊಂದಿ ಆ ಶಿಲುಭೆಯನ್ನು ಪವಿತ್ರಗೊಳಿಸಿದರು. ಇದು ದೇವರು ನಮಗೆ ಪಾಪಗಳಿಂದ ವೀಮೊಚನೆಗೊಳಿಸಲು ಎರ್ಪದಡಿಸಿದ ಯೋಜನೆ. ನಮ್ಮ ಮೇಲೆ ದೇವರಿಗೆ ಪ್ರೀತಿ ಇದೆ, ಅವರಿಗೆ ನಮ್ಮನ್ನು ಕಳೆದುಕೊಳ್ಳಲು ಇಷ್ಟವಿಲ್ಲ, ನೀವೆಲ್ಲರೂ ಅವರ ಸ್ವರ್ಗರಾಜ್ಯದಲ್ಲಿ ಬರಬೇಕೆಂದು ಅವರು ಆಶಿಸುತ್ತಾರೆ. ಅದಕ್ಕಾಗಿಯೇ ದೇವರು ತಮ್ಮ ಪುತ್ರ ಯೇಸುವನ್ನು ಕಳುಹಿಸಿ ಬಲಿ ಅರ್ಪಿಸಿದ್ದಾನೆ, ಕಾರಣ ನೀವು ಪರಿವರ್ತನೆಯಾಗಬೇಕು. ಹೀಗಾಗಿ ನಾವು ಯೇಸು ಹೇಳಿದ ಮಾರ್ಗದಲ್ಲಿ ನಡೆಯೋಣ, ಶಿಲುಭೆಯ ಮೇಲೆ ಮರಣ ಹೊಂದಿದ ಆ ಯೇಸುವೇ ನಿಮಗೆ ದಾರಿದೀಪವಾಗಲಿ” ಎಂದು ಅವರು ಸಂದೇಶ ನೀಡಿದರು.
ಈ ಪ್ರಾರ್ಥನಾ ವಿಧಿಗಳಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಭಾಗಿಯಾದರು. ಈ ಶುಭ ಶುಕ್ರವಾರದ ಧಾರ್ಮಿಕ ವಿಧಿಯಲ್ಲಿ , ಹಲವಾರು ಧರ್ಮ ಭಗಿನಿಯರು, ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು.