ವರದಿ: ವಾಲ್ಟರ್ಮೊಂತೇರೊ, ಬೆಳ್ಮಣ್ಣು

ಬೆಂಗಳೂರಿನಲ್ಲಿ ನಡೆದ ಜೇಸಿ ಭಾರತದ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ವಲಯ ಪ್ರಾಂತ್ಯ ಸಿ ವಿಭಾಗದ ಪ್ರತಿಷ್ಟಿತ ಘಟಕಗಳಲ್ಲಿ ಒಂದಾದ ಜೆಸಿಐ ಬೆಳ್ಮಣ್ಣಿನ ಜೆಸಿ ಚಿನ್ಮಯಿ ಶೆಣೈ ಅವರಿಗೆ 2021 ರ ಅತ್ಯುತ್ತಮ ನೂತನ ಜೇಸಿಐ ಸದಸ್ಯೆ ಪ್ರಶಸ್ತಿಯನ್ನು ಭಾರತೀಯ ಜೆಸಿಐನ ರಾಷ್ಟ್ರೀಯ ಅಧ್ಯಕ್ಷರಾದ ಜೆಸಿ ರಾಖಿ ಜೈನ್ ಅವರು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಜೆಸಿಐ ವಲಯ ಹದಿನೈದರ ವಲಯಾಧ್ಯಕ್ಷೆ ಜೆಸಿ ಸೌಜನ್ಯ ಹೆಗ್ಡೆ ,ಬೆಳ್ಮಣ್ ಜೆಸಿಐನ ಅಧ್ಯಕ್ಷ ರಾದ ಜೆ ಸಿ ಕೃಷ್ಣ ಪವಾರ್ ಮತ್ತಿತರರು ಉಪಸ್ಥಿತರಿದ್ದರು.
