






ದೇಶದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ದೇವಕ್ಕಾಗಿ ಸೈನಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀ ಯುತ ಮಂಜು ಮೊಗವೀರ ಅವರನ್ನ ಜೇಸಿಐ ಕುಂದಾಪುರದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಂಜು ಮೊಗವೀರ ಅವರು ಸೈನಿಕ ವೃತ್ತಿ ಮತ್ತು ಶ್ರೀಲಂಕಾ , ಕಾಶ್ಮೀರ ಗಡಿಗಳ ಸೇವೆಯ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಪೂರ್ವ ವಲಯಾಧಿಕಾರಿ ಜೇಸಿ ಅಶೋಕ್ ತೆಕ್ಕಟ್ಟೆ ಉಪಸ್ಥಿತರಿದ್ದು ಸೇನೆ ಮತ್ತು ಸೈನಿಕ ವೃತಿಯ ಬಗ್ಗೆ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೇಸಿ ಸುಧಾಕರ್ ಕಾಂಚನ್ ವಹಿಸಿದರು.
ಜೇಸಿ ಕುಂದಾಪುರದ ಉಪಾಧ್ಯಕ್ಷರಾದ ಜೇಸಿ ಶಶಿಧರ್ ಶೆಟ್ಟಿ , ಕಾರ್ಯದರ್ಶಿ ಜೇಸಿ ರಾಕೇಶ್ ಶೆಟ್ಟಿ ವಂದಿಸಿದರು. ಮತ್ತು ಜೇಸಿಐ ಕುಂದಾಪುರದ ಸರ್ವ ಸದಸ್ಯರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.