ಜೇಸಿಐ ಬೆಳ್ಮಣ್ಣು: 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು


ಜೇಸಿಐ ಬೆಳ್ಮಣ್ಣು ವತಿಯಿಂದ ಬೆಳ್ಮಣ್ಣು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಬೆಳ್ಮಣ್ಣು ಜೇಸಿಐ ಘಟಕಾಧ್ಯಕ್ಷ ವೀಣೇಶ್ ಅಮೀನ್ ಅವರ ಅಧ್ಯಕ್ಷತೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಕಾರ್ಕಳ ಎಸ್.ವಿ.ಟಿ. ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಮಿತ್ರಪ್ರಭ ಹೆಗ್ಡೆ ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ ಕುರಿತು ರಾಜ್ಯೋತ್ಸವದ ಪ್ರಧಾನ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಬಿ.ಜನಾರ್ಧನ ಭಟ್ ಅವರಿಗೆ ಜೇಸಿಐ ಬೆಳ್ಮಣ್ಣು ಸಾಹಿತ್ಯ ಪ್ರಶಸ್ತಿ, ಯಕ್ಷಕವಿ, ಯಕ್ಷಗಾನ ಭಾಗವತರಾದ ಸೂಡ ಹರೀಶ್ ಶೆಟ್ಟಿ ಅವರಿಗೆ ಜೇಸಿಐ ಬೆಳ್ಮಣ್ಣು ಸಂಸ್ಕøತಿ ಪ್ರಶಸ್ತಿ, ಯುವ ಬರಹಗಾರ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನಂದಳಿಕೆ ಹರಿಪ್ರಸಾದ್ ಅವರಿಗೆ ಜೇಸಿಐ ಬೆಳ್ಮಣ್ಣು ಯುವ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕರಮದ ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ಘಟಕದ ಕಾರ್ಯದರ್ಶಿ ದೀಕ್ಷೀತ್ ದೇವಾಡಿಗ, ಕಾರ್ಯಕ್ರಮ ನಿರ್ದೇಶಕ ಮಾಯಾ ಚರಣ್ ರಾವ್, ಯುವ ಜೇಸಿ ಅಧ್ಯಕ್ಷ ವೈಶಾಖ್ ಹೆಬ್ಬಾರ್, ಜೇಸಿರೇಟ್ ಅಧ್ಯಕ್ಷೆ ಗೀತಾ ಶೆಣೈ ಉಪಸ್ಥಿತಿತರಿದ್ದರು.
ಸನ್ಮಾನಿತರ ಪರಿಚಯವನ್ನು ಘಟಕದ ಪೂರ್ವಾಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕೋಶಾಧಿಕಾರಿ ಸಂದೀಪ್ ಕುಲಾಲ್, ನಿರ್ದೇಶಕ ರಾಝೇಶ್ ಕುಲಾಲ್ ವಾಚಿಸಿದರು. ಅತಿಥಿಗಳ ಪರಿಚಯವನ್ನು ನಿರ್ದೇಶಕಿ ಶ್ವೇತಾ ಎಸ್. ಆಚಾರ್ಯ ನೀಡಿದರು.