ವಿದ್ಯಾರ್ಥಿನಿಯರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಇದೆ ತಿಂಗಳು 20 ರಂದು ತಾಡಿಗೋಳ್ ಗ್ರಾಮದಿಂದ ಕಾಲ್ನಡಿಗೆ ಜಾಥಾ,ಬಹಿರಂಗ ಸಭೆ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (5, -1); aec_lux: 246.60327; hist255: 0.0; hist252~255: 0.0; hist0~15: 0.0;

ಶ್ರೀನಿವಾಸಪುರ: ತಾಡಿಗೋಳ್ ಕ್ರಾಸ್‍ನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಇದೆ ತಿಂಗಳು 20 ರಂದು ತಾಡಿಗೋಳ್ ಗ್ರಾಮದಿಂದ ಕಾಲ್ನಡಿಗೆ ಜಾಥಾ ಹಾಗೂ ಬಹಿರಂಗ ಸಭೆಯನ್ನು ತಾಲ್ಲೂಕು ಕಛೇರಿಯ ಮುಂದೆ ಹಮ್ಮಿಕೊಂಡಿದ್ದೇವೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡರಾದ ಎನ್. ಮುನಿಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಿ ಮಾತನಾಡಿದ ಮುನಿಸ್ವಾಮಿ ಇದೇ ತಿಂಗಳು 20 ರಂದು ಸೋಮವಾರ 9 ಗಂಟೆಗೆ ತಾಡಿಗೋಳ್ ಗ್ರಾಮದಿಂದ ಕಾಲ್ನಡಿಗೆ ಜಾಥಾವನ್ನು ಎಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚಿಗೆ ತಾಡಿಗೋಳ್ ಗ್ರಾಮದಲ್ಲಿ ನಡೆದ ಘಟನೆ, ಸಮಾಜ, ತಲೆ ತಗ್ಗಿಸಿದಂತಾಗಿದೆ. ತಾಡಿಗೋಳ್ ಹಾಗೂ ನಾಗಿರೆಡ್ಡಿಪಲ್ಲಿಯ ಮೂರು ಜನ ಹೆಣ್ಣು ಮಕ್ಕಳು ಬಿ.ಕಾಂ. ಹಾಗೂ ಬಿಎಸ್ಸಿ. ವ್ಯಾಸಂಗಕ್ಕಾಗಿ ಗೌನಿಪಲ್ಲಿಯಿಂದ ಚಿಂತಾಮಣಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು ಗೌನಿಪಲ್ಲಿ ಕೊಂಡಮರಿ ಗ್ರಾಮಗಳಿಂದ ಬರುತ್ತಿದ್ದ ಪುಂಡ ಪೋಕರಿ ಗುಂಪು ಒಂದು ಹೆಣ್ಣು ಮಕ್ಕಳನ್ನು ಆಗಾಗ ಚೂಡಾಯಿಸುತ್ತಿದ್ದರು. ಇದನ್ನು ತಮ್ಮ ಪೋಷಕರಿಗೆ ತಿಳಿಸಿ ಬದ್ದವಾದ ಹೇಳಿದ್ದು ಉಂಟು. ಬದ್ದಿವಾದ ಹೇಳಿದ್ದನ್ನೆ ಪ್ರತಿಷ್ಠೆಯಾಗಿ ಪರಿಗಣಿಸಿ ಇದೇ ತಿಂಗಳು 4 ರಂದು ಪವನ್, ಗಿರೀಶ್, ಬಾಬು ನಾಯಕ್, ಇವರ ಪೋಷಕರು ಗೌನಿಪಲ್ಲಿಯಿಂದ ಚಿಂತಾಮಣಿಗೆ ಬರುತ್ತಿದ್ದ ಬಸ್‍ನಲ್ಲಿ ಬೆಳೆಗ್ಗೆ 8-30 ಸಮಯದಲ್ಲಿ ಕೊಂಡಾಮರಿ ಗೇಟ್‍ನಲ್ಲಿ ನಿಲ್ಲಿಸಿ ಬಸ್‍ನಲ್ಲಿ ಚಿಂತಾಮಣಿಗೆ ಕಾಲೇಜಿಗೆ ಬರುತ್ತಿದ್ದ ಬಾವನ ಎಂಬ ವಿದ್ಯಾರ್ಥಿಯನ್ನು ಪ್ರಯಾಣಿಕರ ಎದುರಲ್ಲಿಯೇ ಹಿಗ್ಗಾ-ಮುಗ್ಗಾ ತಳಿಸಿ ಅವಾಚ್ಯ ಶಬ್ದಗಳಿಂದ ಬೈದು ಬಟ್ಟೆಗಳನ್ನು ಹರಿದುಹಾಕಿ ಸಾರ್ವಜನಿಕರ ಎದುರೆ ಎಳೆದಾಡಿ ಒದ್ದು ಅವಮಾನಪಡಿಸಿ ಪೋನ್‍ನ್ನು ಸಹ ಕಿತ್ತುಕೊಂಡಿದ್ದಾರೆ ಅದೇ ಕ್ರಾಸ್‍ಗೆ ಬಂದ ಜಿಮ್ ಅನಿಲ್‍ಕುಮಾರ್ ಅವರ ಸಹಚಾರರನ್ನು ಕೆರದುಕೊಂಡು ಬಸ್‍ಗಾಗಿ ಕಾಯುತ್ತಿದ್ದ ದಲಿತ ವಿದ್ಯಾರ್ಥಿನಿ ಗೌರಿ ಹಾಗೂ ಯಶ್ವಸಿನಿ ಇವರುಗಳನ್ನು ಹೊಡೆದು ಎಳೆದಾಡಿ ಬಸ್‍ನಿಂದ ಕೆಳಗೆ ಇಳಿಸಿಕೊಂಡು ಮಹಿಳೆಯರಾದ ರಮಾದೇವಿ ಮತ್ತು ಕಲಾವತಿ ಎಂಬುವವರು ತುಂಬ ಅಮಾನುಷವಾಗಿ ದೌರ್ಜನ್ಯವನ್ನು ಮಾಡಿ ಅವಮಾನಿಸಿದ್ದಾರೆ. ಇಂತಹ ಹೀನಾ ಕೃತ್ಯಗಳು ಇನ್ನೂ ಮುಂದೆ ಆಗದಂತೆ ದಲಿತ ಸಂಘಟನೆಗಳ ಒಕ್ಕೂಟದಿಂದ ಜಾಥಾ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದ್ದೇವೆ ನಮ್ಮ ಬೆಂಬಲವಾಗಿ 11 ಸಂಘಟನೆಗಳು ಸೇರಿಕೊಳ್ಳಲಿದ್ದಾರೆ. ಸಾರ್ವಜನಿಕರು ದಲಿತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಬೃಹತ್ ಕಾಲ್ನಾಡಿಗೆ ಜಾಥಾವನ್ನು ಯಶ್ವಸಿಗೊಳಿಸಬೇಕೆಂದು ತಿಳಿಸಿದರು.
ರಾಜ್ಯ ದಲಿತ ಸಂಘರ್ಷಸಮಿತಿಯ ಎನ್. ವೆಂಕಟೇಶ್ ಮಾತನಾಡಿ ಇಂತಹ ಘಟನೆಗಳು ನಡೆಯಲು ಪೋಲೀಸ್ ವೈಪಲ್ಯವೆ ಕಾರಣ ಇವರ ನಿರ್ಲಕ್ಷದಿಂದ ಇಂತಹ ಘಟನೆ ನಡೆದಿದೆ ಇತ್ತೀಚಿಗೆ ಪೋಲೀಸ್ ಠಾಣೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಡಿವೈಎಸ್‍ಪಿ ಗಿರಿ ರವರು ಒಂದು ಹೇಳಿಕೆಯನ್ನು ಕೊಡುತ್ತಾರೆ. ಇದ್ದಕ್ಕೆ ಎಲ್ಲ ಕಾರಣ ಬಸ್ ಸೀಟ್‍ಗಾಗಿ ಎಂದು ಹೇಳಿರುವುದು ಬೇಸರದ ಸಂಗತಿ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವವರು ವಾಸ್ತವಾಂಶವನ್ನು ತಿಳಿದು ಮಾತನಾಡಬೇಕು ಎಂದ ಇವರು ಈ ಕೇಸ್ ಬಗ್ಗೆ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿ ಜವಾಬ್ದಾರಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ದಲಿತ ಸಂಘರ್ಷಸಮಿತಿಯ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ಈ ನೆಲದ ಕಾನೂನನ್ನು ಗೌರವಿಸಬೇಕು ಕಾನೂನನ್ನು ಯಾರು ಕೈಗೆತ್ತುಕೊಳ್ಳಬಾರದು ಹೆಣ್ಣು ಮಕ್ಕಳ ಮೇಲೆ ಗೂಂಡಾವರ್ತನೆ ತೋರಿದ ಮಹಿಳೆಯರನ್ನು ಕೂಡಲೆ ಬಂದಿಸಬೇಕು. ಕುಟುಂಬಕ್ಕೆ ನ್ಯಾಯವನ್ನು ಒದಗಿಸುವ ಕೆಲಸ ಮಾಡಬೇಕು ಈ ಬೃಹತ್ ಪ್ರತಿಭಟನೆಯಲ್ಲಿ ಎಲ್ಲಾ ಸಂಘಟನೆಯವರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶ್ವಿಸಿಗೊಳಸಬೇಕೆಂದರು.
ದಲಿತ ಸಂಘರ್ಷಸಮಿತಿಯ ತಾಲ್ಲೂಕು ಸಂಚಾಲಕರದ ದೊಡ್ಡಬಂದ್ರ್ಲಾಹಳ್ಳಿ ಮುನಿಯಪ್ಪ ಮಾತನಾಡಿ ಎಲ್ಲಾ ದಲಿತ ಸಂಘಟನೆಗಳು ರೈತಪರ ಸಂಘಟನೆಗಳು, ಸ್ವಯಂ ಪ್ರೆರೀತವಾಗಿ ಈ ಕಾರ್ಯಕ್ರಮದಲ್ಲಿ ಭಾವಹಿಸಬೇಕು. ಈ ಒಂದು ಘಟನೆ ಈ ನವ ಸಮಾಜ ತಲೆ ತಗ್ಗಿಸಿದಂತಾಗಿದೆ. ಸ್ತ್ರೀಯರು ನಡು ರಾತ್ರಿಯಲ್ಲಿ ನಮ್ಮದಿಯಾಗಿ ಒಡಾಡಬೇಕೆಂಬ ಗಾಂಧೀಜಿ ಖಂಡ ಕನಸು ಕನಸ್ಸಾಗಲಿ ಕಾಣುತ್ತಿಲ್ಲ. ಸ್ವಾತ್ರಂತ್ಯ 75 ವರ್ಷಗಳು ಕಳೆದರೂ ಇಂತಹ ಘಟನೆಗಳು ನಿಲ್ಲುತ್ತಿಲ್ಲ. ಇಂತಹ ಕ್ರೂರವನ್ನು ಖಂಡಿಸಿ ಇದೇ ತಿಂಗಳ 20 ರಂದು ಕಾಲ್ನಾಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದೇವೆ. ಈ ಜಾಥಾದಿಂದ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ಈ ಒಂದು ಕಾರ್ಯಕ್ರಮಕ್ಕೆ ಅಲ್ಪ ಸಂಖ್ಯಾತರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಕೂಲಿ ಕಾರ್ಮಿಕರು, ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮ ಸಹಕಾರ ನೀಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ದಲಿತ ಬುದ್ದ ಸೇನೆಯ ರಾಜ್ಯಾಧ್ಯಕ್ಷ ವರ್ತನಹಳ್ಳಿ ವೆಂಕಟೇಶ್, ಕರ್ನಾಟಕ ದಲಿತ ಪ್ರಜಾಸೇನೆಯ ತಾಲ್ಲೂಕು ಅಧ್ಯಕ್ಷ ಅಗ್ರಹಾರ ವೆಂಕಟೇಶ್, ದಲಿತ ಸಂಘರ್ಷಸಮಿತಿಯ ಸಂಘಟನಾ ಸಂಚಾಲಕ ಮುಳಬಾಗಿಲಪ್ಪ, ಖಜಾಂಚಿ ಮುದಿಮಡಗು ವಾಸು. ಸಂಘಟನಾ ಸಂಚಾಲಕ ಚಿಂತಾಮಣಿ ಎನ್. ಕೃಷ್ಣಾರೆಡ್ಡಿ, ನಾಗದೇನಹಳ್ಳಿ ಶ್ರೀನಿವಾಸ್, ಕೂಸ್ಸಂದ್ರ ರೆಡ್ಡೆಪ್ಪ, ಚಲ್ದಿಗಾನಹಳ್ಳಿ ಈರಪ್ಪ, ಟಿಪ್ಪುಸುಲ್ತಾನ್, ಸೆಕ್ಯುಲರ್ ಸೇನೆಯ ತಾಲ್ಲೂಕು ಅಧ್ಯಕ್ಷ ಮಹಮ್ಮದ್ ರಫೀ, ಕಲಾ ಮಂಡಳಿ ಹೊದಲಿ ನಾರಾಯಣಸ್ವಾಮಿ, ಅತ್ತಿಕುಂಟೆ ನಾರಾಯಣಸ್ವಾಮಿ, ದಲಿತ ಮುಖಂಡರು ಹಾಜರಿದ್ದರು.