ಕಾರ್ಕಳ : ವಿಶ್ವ ಪ್ರಸಿದ್ದ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವ-2025 ಜನವರಿ 26ರಿಂದ 30ರ ವರೆಗೆ ಜಗಲಿದೆ. 2025 ರ ವರ್ಷದ ಮಹೋತ್ಸವದ ಸಂದೇಶ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” ಎಂಬುವುದಾಗಿದೆ.
ಜನವರಿ 26ರ ಬೆಳಿಗ್ಗೆ 10.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನಡೆಯಲಿದ್ದು, ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ
ಜನವರಿ 27ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು, ಉಡುಪಿ ಧರ್ಮಪ್ರಾಂತ್ಯದ ಶೇಷ್ಠ ಧರ್ಮಗುರು ಅ.ವಂ.ಫರ್ಡಿನಾಂಡ್ ಗೋನ್ಸಾಲ್ವಿಸ್ ನೆರವೇರಿಸಲಿದ್ದಾರೆ.
ಜನವರಿ 28ರಂದು ಸಾಯಂಕಾಲ 5.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ಯನ್ನು ಬೆಳ್ತಂಗಡಿ ಧರ್ಮಾಧ್ಯಕ್ಷ ಪರಮಪೂಜ್ಯ ಲೋರೆನ್ಸ್ ಮುಕ್ಕುಝೀ ನೆರವೇರಿಸಲಿದ್ದಾರೆ.
ಜನವರಿ 29ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು ಮಂಗಳೂರು ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಸೊಜ್ ನೆರವೇರಿಸಲಿದ್ದಾರೆ.
ಜನವರಿ 30ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು. ಬಾರುಯಿಪುರ್ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಸಾಲ್ವದೊರ್ ಲೋಬೋ ನೆರವೇರಿಸಲಿದ್ದಾರೆ,
*ಸಂತ ಲೋರೆನ್ಸರ ಗೌರವಾರ್ಥ ನವೇನ ಪ್ರಾರ್ಥನೆಯು ಜನವರಿ 17ರಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 9 ಗಂಟಗೆ ಆರಾಧನೆ, 9.30ಕ್ಕೆ ಬಲಿಪೂಜೆ ನವೇನಕ್ಕೆ ಕೋರಿಕೆಗಳು, ಮಹೋತ್ಸವಕ್ಕೆ ಫಿರ್ಜೆಂತ್ ಹಾಗೂ ಮುಡ್ದಮ್ ಸೂಕ್ತ ಸಮಯದಲ್ಲಿ ಕಳುಹಿಸಬಹುದು.
ಜನವರಿ 26ರಂದು ರವಿವಾರ ಮಕ್ಕಳಿಗೋಸ್ಕರ ವಿಶೇಷ ಬಲಿಪೂಜೆ ಇರುವುದು. ಆ ದಿನದ ಪ್ರಥಮ ಪೂಜೆ ಬೆಳಿಗ್ಗೆ 7.30ಕ್ಕೆ ಕೊನೆಯ ಪೂಜೆ ರಾತ್ರಿ 8ಗಂಟೆಗೆ ನೆರವೇರಲಿರುವುದು.
*ಜನವರಿ 27ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ 6.00 ಗಂಟಗೆ ದಿವ್ಯಬಲಿಪೂಜೆ ಇರುವುದು. ಆ ದಿನದಂದು ರೋಗಿಗಳಿಗಾಗಿ ವಿಶೇಷ ಪೂಜೆ ಹಾಗೂ ಆ ದಿನ ಮಾತ್ರ ರೋಗಿಗಳ ವಾಹನಗಳನ್ನು ಇಗರ್ಜಿಯ ವಠಾರಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಬೇರೆ ದಿನಗಳಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
*ಜನವರಿ 28ರಂದು ಹಾಗೂ ಜನವರಿ 29ರಂದು ಪ್ರಥಮ ಪೂಜೆ ಬೆಳಿಗ್ಗೆ 8.00 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 10.00ಗಂಟೆಗೆ ನೆರವೇರಲಿದೆ.
*ಜನವರಿ 30ರಂದು ಪ್ರಥಮ ಪೂಜೆ ಬೆಳಿಗ್ಗೆ 8.00ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 8.30ಕ್ಕೆ ನೆರವೇರಲಿದೆ.
ಪುಣ್ಯಕ್ಷೇತ್ರದ ವಠಾರದಲ್ಲಿ ಹರಕೆಯ ಮೊಂಬತ್ತಿ ಹಾಗೂ ಧಾರ್ಮಿಕ ವಸ್ತುಗಳು ಪುಣ್ಯಕ್ಷೇತ್ರದ ಸ್ಟಾಲ್ನಲ್ಲಿ ಸಿಗುವುದು. ಹರಕೆಯ ಪೂಜೆಗಳನ್ನು ಸ್ವೀಕರಿಸುವ ವ್ಯವಸ್ಥೆ ಇರುವುದು. ನವೇನದ ದಿನಗಳಲ್ಲಿ ಹಾಗೂ ಹಬ್ಬದ ದಿನಗಳಲ್ಲಿ ಭಕ್ತಾದಿಗಳಿಗೆ ವಿಶೇಷ ಪಾಪ ನಿವೇದನೆಯ ವ್ಯವಸ್ಥೆ ಇರುವುದು ಎಂದು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ, ಸಂತ ಲೋರೆನ್ಸ್ ಬಸಿಲಿಕಾ ಆಡಳಿತ ಸಮಿತಿಯ ರೆಕ್ಟರ್ ಅ.ವಂ.ಅಲ್ಬನ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.