

ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಕ್ರಾಸ್ ನಲ್ಲಿರುವ ಮಿನರ್ವ ಶಾಲೆಯ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜಲಾನಯನ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಸಹಾಯ ಕೃಷಿ ನಿರ್ದೇಶಕರು ಕೆ.ಸಿ.ಮಂಜುನಾಥ್ ನೆಲವಂಕಿ ಗ್ರಾ.ಪಂ ಅಧ್ಯಕ್ಷರಾದ ರಾಧಮ್ಮ ರಘುನಾಥರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮ ಕುರಿತು ಸಹಾಯ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಣ್ಣು ರಕ್ಷಣೆ, ನೀರು ರಕ್ಷಣೆ ಮಾಡುವ ಕುರಿತು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಯೋಜನೆಗೆ ತರಲಾಗಿದೆ .
ಇತ್ತೀಚಿನ ದಿನಗಳಲ್ಲಿ 1300 ರಿಂದ 1400 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲಾ, ಕೃಷಿ ಇಲಾಖೆಯಿಂದ ಹಲವು ಯೋಜನೆಗಳನ್ನು ರೈತರಿಗೆ ನೀಡಲಾಗುತ್ತಿದೆ ಕೃಷಿಹೊಂಡ, ಬದು ನಿರ್ಮಾಣ ಸೇರಿ ಹಲವು ಯೋಜನೆಗಳನ್ನು ನೀಡಲಾಗಿದ್ದು ಬಹಳಷ್ಟು ರೈತರು ಸದ್ಭಳಕೆ ಮಾಡಿಕೊಂಡಿದ್ದಾರೆ ಮಳೆ ನೀರನ್ನು ಶೇಖರಣೆ ಮಾಡಬಹುದು ಪುನಃ ಸದ್ಭಳಕೆ ಮಾಡಬಹುದು .
ಅದೇ ರೀತಿಯಾಗಿ ರೈತರು ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ರಾಸಾಯನಿಕಗಳನ್ನು ಬಳಕೆಯಿಂದ ಭೂಮಿ ಸಂಪೂರ್ಣವಾಗಿ ಹದಗೆಡುತ್ತಿದೆ ಹೀಗೆ ಮುಂದುವರಿಸಿದರೆ ನಮ್ಮ ಮುಂದಿನ ಪೀಳಿಗೆಗೆ ತುಂಬಾ ಕಷ್ಟವಾಗುತ್ತದೆ ಆದ್ದರಿಂದ ರೈತರು ದಯವಿಟ್ಟು ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಹೊಗಳಗೆರೆ ಕೃಷಿ ವಿಜ್ಞಾನಿ ಡಾಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ ಮಣ್ಣು ಮತ್ತು ನೀರು ಸಂರಕ್ಷಣೆ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಧಮ್ಮ ರಘುನಾಥ ರೆಡ್ಡಿ,ಕೃಷಿ ಅಧಿಕಾರಿ ಈಶ್ವರ್, ವಕೀಲ ಮುನಿರಾಜು, ಗಾಯಕ ಹೂದಲಿ ನಾರಾಯಣಸ್ವಾಮಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
