ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಪ್ರತಿ ವ್ಯಕ್ತಿಯೊಬ್ಬರಿಗೆ ಪ್ರತಿದಿನ 55 ಲೀಟರ್ ನೀರು ಅಗತ್ಯವಿದ್ದು, ಅದನ್ನು ಮನೆ-ಮನೆಗೂ ಪೂರೈಸಲು ತಾಲ್ಲೂಕಿನದೆಲ್ಲೆಡೆ ಜಲಜೀವನ್ ಮಿಷನ್ ಎಂಬ ವಿನೂತನ ಯೋಜನೆ ಜಾರಿಗೊಳ್ಳಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್.ಆನಂದ ತಿಳಿಸಿದರು.
ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಕಾರ್ಯಾಲಯದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಏರ್ಪಡಿಸಿದ್ದ ಜಲಜೀವನ್‍ಮಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಸ್.ಆನಂದ ಯಾರಿಗೂ ನೀರಿನ ಸಮಸ್ಯೆ ಕಾಡದಂತೆ ಕೊಳವೆಗಳಲ್ಲಿ ನಿತ್ಯ ನೀರು ಹರಿಸುವ ಯೋಜನೆ ಇದಾಗಿದೆ ಜಿಲ್ಲಾ ಪಂಚಾಯಿತಿಗಳ ಮೂಲಕ ಅನುಷ್ಠಾನಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಪಿಡಿಓಗಳ ಮೂಲಕ ಹಳ್ಳಿಗಳ ಸರ್ವೆ ಕಾರ್ಯ ಪೂರ್ಣಗೊಳಸಬೇಕಾಗಿದೆ. ಅಂದಾಜು ಇನ್ನೊರೆಡು ವರ್ಷಗಳಲ್ಲಿಯೇ ಈ ಯೋಜನೆಯನ್ನು ಸಂಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.
ಕೇಂದ್ರ ಸರ್ಕಾರದ ಜಲಜೀವನ್‍ಮಿಷನ್ ಯೋಜನೆಡಿಯಲ್ಲಿ ರಾಜ್ಯ ಸರ್ಕಾರ ಮನೆ ಮನೆಗೆ ಗಂಗೆ ರೂಪಿಸಿದ್ದು ಯೋಜನೆಯಡಿ 2024 ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ನಳದ ಮೂಲಕ ಶುದ್ದ ಮತ್ತು ಸುರಕ್ಷತ ಕುಡಿಯು ನೀರು ಒದಗಿಸುವ ಉದ್ದೇಶದಿಂದ “ಹರ್‍ಘರ್ ನಲ್ ಸೇ ಜಲ್” ಎಂಬ ಮಹಾತ್ವಾಂಕ್ಷೆ ಯೋಜನೆಯನ್ನು ಜಾರಿಗೊಳಿಸಲಿದ್ದು, ರಾಜ್ಯ ಸರ್ಕಾರವು 2023 ರ ಒಳಗಾಗಿ ತಾಲ್ಲೂಕಿನÀ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲು ಮನೆ ಮನೆಗೆ ಗಂಗೆ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಪ್ರತಿ ಮನೆ ಮನೆಗೂ ಮೀಟರ್ ಅಳವಡಿಸಿ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಒದಗಿಸುತ್ತಿರುವುದು ವಿಶೇಷವಾಗಿದೆ.
ನೀರು ಪೂರೈಕೆ ಹೇಗೆ
ಹಳ್ಳಿಗಳಲ್ಲಿನ ಕುಟುಂಬ ಸಂಖ್ಯೆ ಜನ ಸಂಖ್ಯೆಯ ಲೆಕ್ಕವನ್ನು ಹಾಕಬೇಕಾಗಿದೆ. ಇದರಲ್ಲಿ ಎಷ್ಟು ಕೊಳಾಯಿಗಳ ಅವಶ್ಯಕತೆ ಇದೆ ಎಂಬುದರ ಬಗ್ಗೆ ಜಿಲ್ಲಾ ಪಂಚಾಯಿತಿಗೆ ವರದಿ ನೀಡಬೇಕಾಗಿದೆ. ಇದರ ಆದಾರದ ಮೇಲೆ ನೀರಿನ ಪೂರೈಕೆ ನಡೆಯಲಿದೆ ಪ್ರತಿ ಮನೆಮನೆಗೂ ಕೊಳಾಯಿ ಮೂಲಕವೇ ನೀರು ಪೂರೈಸುವ ತಂತ್ರ ಇದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ, ಹಾಗೂ ರಾಜ್ಯ ಸರ್ಕಾರ ಶೇ. 45 ರಷ್ಟು ಅನುದಾನ ನೀಡುತ್ತದೆ. ಉಳಿದ ಶೇ 10 ರಷ್ಟು ಅನುದಾನ ಜಲಜೀವನ್‍ಮಿಷನ್ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಗ್ರಾಮದ ಸಾರ್ವಜನಿಕರ ವಂತಿಕೆಯಾಗಿ ನೀಡಬೇಕಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸ್ವಚ್ಚಭಾರತ್ ಮಿಷನ್ ಜಿಲ್ಲಾ ಸಂಯೋಜಕ ಅಧಿಕಾರಿ ಜಗದೀಶ್ ಎಇಇ ನಾರಾಯಣಸ್ವಾಮಿ, ನರೇಗಾ ಯೋಜನೆ ನಿರ್ದೇಶಕ ರಾಮಪ,್ಪ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ನರೇಗಾ ಇಂಜನೀಯರ್‍ಗಳು ಉಪಸ್ಥಿತರಿದ್ದರು.