ಶ್ರೀನಿವಾಸಪುರ : ಜಲಸಮಿತಿಗಳು, ಗ್ರಾಮಗಳ ನೀರು ಸರಬರಾಜು ವ್ಯವಸ್ಥೆಗಳ ಯೋಜನೆ, ಅನುಷ್ಟಾನ , ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಮೂಲಕ ಪ್ರತಿ ಮನೆಗೂ ನಿಯಮಿತವಾಗಿ ಮತ್ತು ದೀಘಾವದಿಯಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತವೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಗುರುವಾರ ಜಲಜೀವನ ಮಿಷನ್ ಯೋಜನೆಯಡಿಯಲ್ಲಿನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಸಧ್ಯಕ್ಕೆ ನೀರನ ಸಮಸ್ಯೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಡೆಂಗ್ಯು, ಚಿಕುನ್ಗುನ್ಯ ಸಾಂಕ್ರಮಿಕ ರೋಗಗಳು ರಾಜ್ಯ ದ್ಯಾಂತ ನಾಗರೀಕನ್ನು ಕಾಡುತ್ತಿದ್ದು, ಈ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು. ಅತಿ ಶೀಘ್ರವಾಗಿ ತಾಲೂಕಿನ ಜಲ ಜೀವನ ಮಿಷನ್ಗೆ ಸಂಬಂದಿಸಿದ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿದ್ದು, ಜೆಜೆಎಂ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಹಾಗು ಗುತ್ತಿಗೆದಾರರೊಂದಿಗೆ ಸಭೆಯನ್ನು ಆಯೋಜಿಸಿ ಪ್ರಗತಿ ಪರಿಶೀಲನೆ ಮಾಡಲಾಗುವುದು.
ಈ ಕಾರ್ಯಕ್ರಮದ ಅಡಿಯಲ್ಲಿ ಪುರ್ನಪಲ್ಲಿ, ದಾಸತಿಮ್ಮನಹಳ್ಳಿ, ಚೆನ್ನಯ್ಯಗಾರಿಪಲ್ಲಿ, ಪಾಳ್ಯ , ಮೊಗಿಲಹಳ್ಳಿ, ಚಿಂತಮಾಕಲಹಳ್ಳಿಗಳಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮಾಜಿ ಸದಸ್ಯ ಇಂದಿರಾ ಭವನ್ ರಾಜಣ್ಣ, ಚಲ್ದಿಗಾನಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್, ಪಾಳ್ಯ ಗ್ರಾ.ಪಂ ಸದಸ್ಯ ನಾಯಕ್, ಮುಖಂಡರಾದ ಶಿವಪುರ ಗಣೇಶ್, ಪಾಳ್ಯ ಬೈರೆಡ್ಡಿ, ಕೂಲಗುರ್ಕಿ ತಿಮ್ಮರಾಯಪ್ಪ, ಪುರ್ನಪಲ್ಲಿ ನಾಗರಾಜರೆಡ್ಡಿ, ನರೇಶ್, ಲಕ್ಷಣರೆಡ್ಡಿ, ಅನಿಲ್, ದಾಸತಿಮ್ಮನಹಳ್ಳಿ ರೆಡ್ಡಪ್ಪ, ಲಕ್ಷ್ಮೀಸಾಗರ ಮಂಜುನಾಥ್, ಗುತ್ತಿಗೆದಾರ ಪಾಟೀಲ್ ಇದ್ದರು.