JANANUDI.COM NETWORK EDITOR : BERNARD D’COSTA
ಪುತ್ತೂರು: ಮನೆ ಬಳಿ ಬಂದಿದ್ದ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಯ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ ಹೆಬ್ಬಾವು ಸಾಯಲು ಕಾರಣವಾದ ಆರೋಪದಡಿ ಗ್ರಾ. ಪಂ ಸಿಬ್ಬಂದಿ ಸಹಿತ ಇಬ್ಬರನ್ನು ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಪುತ್ತೂರು ಕೊಳ್ತಿಗೆ ಗ್ರಾಮದ ಶೇಡಿಗುರಿ ವಾಸಿ ಧನಂಜಯ(38) ಮತ್ತು ಗ್ರಾ. ಪಂ ಸಿಬ್ಬಂದಿ ಜಯ(38) ಬಂಧಿತರು.
ಹೆಬ್ಬಾವನ್ನು ಹಿಡಿದು ಕಟ್ಟಡದ ಬಾಗಿಲ ಬೀಗಕ್ಕೆ ಕಟ್ಟಿದ ಪರಿಣಾಮ ಹಾವು ಮೃತಪಟ್ಟಿದೆ. ಹೆಬ್ಭಾವನ್ನು ಕೊಲ್ಲುವುದು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜಾಮೀನು ರಹಿತ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿತರನ್ನು ಬಂಧಿಸಿ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು . ನ್ಯಾಯಾಲಯವು ಇವರಿಗೆ ಜುಲೈ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ವೈ.ಕೆ. ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ. ಕಾರ್ಯಪ್ಪ ಇವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಬಿ. ಎಮ್. ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಎಸ್. ಎನ್. ಅರಣ್ಯ ರಕ್ಷಕರುಗಳಾದ ದೀಪಕ ,ನಿಂಗರಾಜ್ ಮತ್ತು ಇಲಾಖೆ ವಾಹನ ಚಾಲಕರಾದ ಜಗದೀಶ್ ಪಾಲ್ಗೊಂಡಿದ್ದರು.