ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವದ ಬೆಂಕಿಯಿಲ್ಲದೆ ಅಡುಗೆ ಮಾಡುವ ಸ್ಪರ್ಧೆ : ಕಟಪಾಡಿ ಪ್ರಥಮ

ವರದಿ: ಸ್ಟೀವನ್ ಕುಲಾಸೊ,ಉದ್ಯಾವರ್

ಉಡುಪಿ : ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ವಿಶಿಷ್ಟ ಸ್ಪರ್ಧೆಯೊಂದು ನಡೆದಿತ್ತು. ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ದೇವಾಲಯಗಳಿಗೆ ಮೀಸಲಾಗಿದ್ದ ಈ ಸ್ಪರ್ಧೆಯಲ್ಲಿ, ಹನ್ನೊಂದು ತಂಡಗಳು ಭಾಗವಹಿಸಿದ್ದವು. ಪ್ರಖ್ಯಾತ ಹೋಟೆಲ್ ಉದ್ಯೋಗಿಗಳಂತೆ ತಾವೇನು ಕಮ್ಮಿ ಇಲ್ಲವೆಂದು ಸ್ಪರ್ಧಿಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಬಗೆ ಬಗೆಯ ತಿಂಡಿ ತಿನಿಸುಗಳು, ಸಲಾದ್, ಕಲರ್ ಫುಲ್ ಜ್ಯೂಸ್, ಚಟ್ನಿ, ಸ್ಯಾಂಡ್ ವಿಚ್, ಕೇಕ್ ಜೊತೆಗೆ ಹತ್ತು ಹಲವಾರು ತಿಂಡಿ ತಿನಿಸುಗಳನ್ನು ಕೇವಲ 1 ಗಂಟೆಯಲ್ಲಿ ತಯಾರಿಸಿ ಯಾಗಿತ್ತು. ದೂರದ ತ್ರಾಸಿ, ಕುಂದಾಪುರ, ಸಾಸ್ತಾನ, ಉಡುಪಿ, ಮೂಡುಬೆಳ್ಳೆ, ಪಲಿಮಾರ್, ಕಟ್ಪಾಡಿ, ಶಿರ್ವ, ಕಣಜಾರ್, ಕುಂಟಲ್ ನಗರ ಮತ್ತು ಆತಿಥೇಯ ಉದ್ಯಾವರ ತಂಡಗಳು ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಇದೆಲ್ಲವೂ ನಡೆದದ್ದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಮಶ್ರೂಮ್ ಗಾರ್ಡನ್ ನಲ್ಲಿ. ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವದ, ಸಂಭ್ರಮದ 44ನೇ ಕಾರ್ಯಕ್ರಮ ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ದೇವಾಲಯಗಳಿಗೆ ನಡೆಸಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಲಿಮಾರು ಸಂತ ಪಿಯುಸ್ ದೇವಾಲಯದ ಧರ್ಮಗುರು ವಂ. ಫಾ. ಡಾ. ರಾಕ್ ಡಿಸೋಜಾ ಉದ್ಘಾಟಿಸಿ, ಶುಭ ಹಾರೈಸಿದರು. ಉದ್ಯಮಿ ಮತ್ತು ರಾಜ್ಯಮಟ್ಟದ ಅತ್ಯುತ್ತಮ ಕೃಷಿ ಪ್ರಶಸ್ತಿ ಪುರಸ್ಕೃತ ಡೇನಿಯಲ್ ರೇಂಜರ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂ. ಫಾ. ಸ್ಟ್ಯಾನಿ ಬಿ. ಲೋಬೊ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರಿಗೆ ಎರೊಲ್ ಗೊನ್ಸಾಲ್ವಿಸ್ ಮತ್ತು ರೊಸಾಲಿಯಾ ಕರ್ಡೋಜಾ ವಿವಿಧ ಸ್ಪರ್ಧೆಗಳನ್ನು ನಡೆಸಿದರು. ಖ್ಯಾತ ಕೊಂಕಣಿ ಹಾಸ್ಯ ಕಲಾವಿದ ಡೊಲ್ಲಾ ಮಂಗಳೂರು, ತನ್ನ ಹಾಸ್ಯ ಚಟಾಕಿಯಿಂದ ಸರ್ವರನು ರಂಜಿಸಿದರು. ತೀರ್ಪುಗಾರರ ತೀರ್ಪು ನೀಡಿದ್ದೇ ತಡ, ಪ್ರೇಕ್ಷಕರಂತೂ ಹನ್ನೊಂದು ತಂಡಗಳು ಸಿದ್ಧಪಡಿಸಿದ್ದ ಜ್ಯೂಸ್, ಸಿಹಿತಿಂಡಿ, ಸಲಾದ್, ಚಟ್ನಿ ಜೊತೆಗೆ ಬಗೆ ಬಗೆಯ ತಿಂಡಿ ತಿನಿಸುಗಳ ಸವಿಯನ್ನು ಸವಿದರು.

ತೀರ್ಪುಗಾರರ ನಿರ್ಣಯದಂತೆ ಕಟಪಾಡಿ ಸಂತ ವಿನ್ಸೆಂಟ್ ಡಿ’ಪಾವ್ಲ್ ದೇವಾಲಯದ ಸ್ಪರ್ಧಿಗಳು ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ 10,001/- ನಗದು ಮತ್ತು ಟ್ರೋಫಿ ಪಡೆದರೆ, ದ್ವಿತೀಯ ಸ್ಥಾನಿ 7007/- ಮತ್ತು ಟ್ರೋಫಿ ಆತಿಥೇಯ ಉದ್ಯಾವರದ ಪಾಲಾಯ್ತು. ತೃತೀಯ ಸ್ಥಾನ 5005/-ನಗದು ಮತ್ತು ಟ್ರೋಫಿ ಪಲಿಮಾರು ಸಂತ ಪಿಯೂಸ್ ದೇವಾಲಯದ ಪಾಲಾಯ್ತು. ಭಾಗವಹಿಸಿದ ಪ್ರತಿ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ. ರೊಲ್ವಿನ್ ಅರಾನ್ಹಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಸಹ ಪ್ರಾಯೋಜಕರಾದ ವಿಲ್ಫ್ರೆಡ್ ಡಿಸೋಜ, ಜೋಸೆಫ್ ಗ್ರೇಸಿ ಕರ್ಡೋಜಾ, ಲಾರೆನ್ಸ್ ಕರ್ಡೋಜಾ, ನಿರ್ದೇಶಕರಾದ ರೊನಾಲ್ಡ್ ಡಿಸೋಜ, ಐಸಿವೈಎಂ ಅಧ್ಯಕ್ಷ ರೋಯಲ್ ಕ್ಯಾಸ್ತಲಿನೊ, ಕಾರ್ಯದರ್ಶಿ ಜೇನ್ ಡಿಸೋಜ, ಸಲಹೆಗಾರರಾದ ರೋಯ್ಸ್ ಫೆರ್ನಾಂಡಿಸ್, ಜೂಲಿಯ ಡಿಸೋಜಾ ಉಪಸ್ಥಿತರಿದ್ದರು.

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜ ಸ್ವಾಗತಿಸಿದರೆ, ಜಸ್ಟನ್ ಕರ್ಡೋಜಾ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಅಸುಂತ ಮಚಾದೋ ಮತ್ತು ಐರಿನ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.