JANANUDI.COM NETWORK
ಮಂಗಳೂರು,ಮೇ.20: ಲಸಿಕೆ ಬಗ್ಗೆ ಚರ್ಚ್ಗಳಲ್ಲಿ ಅಪಪ್ರಚಾರ ಮಾಡುತ್ತಾರೆಂಬ ಸುಳ್ಳು ಹೇಳಿಕೆಗೆ ಸಂಬಂಧಪಟ್ಟಂತೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರು, ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ಅವರಿಗೆ ಮನವಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಐವನ್ ಡಿಸೋಜ, “ದೇಶದ ಲೋಕಸಭೆಗೆ ಶೋಭಾ ಕರಂದ್ಲಾಜೆಯಂತಹ ಸಂಸದರು ಆಯ್ಕೆಯಾಗಿರುವುದು ಪ್ರಜಾಪ್ರಭುತ್ವದ ಒಂದು ದೊಡ್ಡ ದುರಂತ. ಇಂತಹವರನ್ನು ಪ್ರಜಾಪ್ರಭುತ್ವದ ಸದಸ್ಯತ್ವದಿಂದ ರದ್ದು ಮಾಡಬೇಕು. ತಮ್ಮ ಸ್ವಾರ್ಥಕ್ಕಾಗಿ ಒಂದು ಸಮುದಾಯವನ್ನೇ ಬಲಿತೆಗೆದುಕೊಂಡು, ಸುಳ್ಳು ಹೇಳಿಕೆಗಳನ್ನು ನೀಡಿರುವುದು ಪ್ರಜಾಪ್ರಭುತ್ವದಲ್ಲಿ ಇದೊಂದು ಕಪ್ಪು ಚುಕ್ಕೆ” ಎಂದು ತಿಳಿಸಿದರು.
’ಸಾಧ್ಯವಾಗುವುದಾದರೆ, ಶೋಭಾ ಕರಂದ್ಲಾಜೆಯವರು ನಾಳೆಯೇ 10,000 ಕ್ರೈಸ್ತ ಸಮುದಾಯದ ಜನರಿಗೆ, ತನ್ನ ಕಚೇರಿಯ ಮುಂದೇನೆ ಲಸಿಕೆ ತೆಗೆದುಕೊಳ್ಳಲ್ಲಿಕೋಸ್ಕರ ಜನ ಕರೆದುಕೊಂಡು ಬರುವುದಾಗಿ, ಮತ್ತು ಲಸಿಕೆಯನ್ನು ಪೂರೈಸುವಂತೆ’ ಅವರು ಸವಾಲು ಹಾಕಿದರು.
ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ಅವರಿಗೆ ಮನವಿ ನೀಡಿದ್ದು, ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮನವಿಯನ್ನು ಸ್ವೀಕರಿಸಿದ ಡಿಸಿಪಿಯವರು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅದೇ ರೀತಿ ಪಾಂಡೇಶ್ವರ ಪೋಲಿಸ್ ಠಾಣೆಗೂ ತೆರಳಿ, ಪೋಲಿಸ್ ಇನ್ಸ್ಪೆಕ್ಟರ್ಗೆ ದೂರು ಸಲ್ಲಿಸಲಾಗಿದ್ದು, ದೂರನ್ನು ಸ್ವೀಕರಿಸಿದ ಪೋಲಿಸರು ಕೂಡಲೇ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.ಈ ವೇಳೆ ಮಾಜಿ ಕಾರ್ಪೊರೇಟರ್ ಭಾಸ್ಕರರಾವ್, ಆಶಿತ್ ಪಿರೇರಾ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ರೋಷನ್ ರೈ, ಸಿ.ಎಂ ಮುಸ್ತಫ, ಆರೀಫ್ ಬಾವ, ಸಲೀಂ ಮುಕ್ಕ, ಮಿಲಾಜ್, ಯೂಸುಫ್ ಉಚ್ಚಿಲ, ಬಾಜಿಲಾ, ಹಬೀಬುಲ್ಲಾ ಕಣ್ಣೂರ್ ಮುಂತಾದವರು ಉಪಸ್ಥಿತರಿದ್ದರು.