

ಶ್ರೀನಿವಾಸಪುರ : ಶಾಲೆಗಾಗಿ ನಾವು ಇದ್ದೇವೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯತ್ತಾ ಕೊಂಡ್ಯೂವುದು ಶಿಕ್ಷಕರ ಜವಾಬ್ದಾರಿ ಎಂದು ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಮುಜೀದ್ ಹೇಳಿದರು.
ಪಟ್ಟಣದ ಜಡ್.ಹೆಚ್.ಮೊಹುಲ್ಲಾ ದ ಸರ್ಕಾರಿ ಉರ್ದು ಹಾಗೂ ಇಂಗ್ಲೀಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಎ.ಪಿ.ಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಗುರುತಿನ ಚೀಟಿ ಹಾಗು ಅಂಕ ಪಟ್ಟಿ ಲೇಖನಿ ಮತ್ತು ನೂತನ ವರ್ಷದ ಕ್ಯಾಲೆಂಡರ್ ವಿತರಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದು, ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಹೇಳಿಕೊಡಲಾಗುತ್ತಿದ್ದು, ವಿದ್ಯಾರ್ಥಿಗಳ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಖಜಾಂಚಿ ಎ.ಟಿ.ಎಸ್. ರಿಜ್ವಾನ್ ಮಾತನಾಡಿ ಈ ಶಾಲೆಯಲ್ಲಿ ೧೭೫ ವಿದ್ಯಾರ್ಥಿಗಳು ಇದ್ದು ಶಾಲಾ ಕೊಠಡಿಗಳ ಕೊರತೆ ಇದ್ದು, ಈ ಸಂಬಂದ ಶಿಕ್ಷಣ ಸಚಿವರಿಗೆ ಕೊಠಡಿಗಳನ್ನು ಸರ್ಕಾರದಿಂದ ನಿರ್ಮಿಸಿ ಕೊಡಲು ಅಹವಾಲನ್ನು ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಶಾಲೆಗೆ ಶೈಕ್ಷಣಿಕ ಮುನ್ನೆಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಇಲಿಯಾಜ್ ಪಾಷ, ಸಂಘನಾ ಕಾರ್ಯದರ್ಶಿ ಇಂತಿಯಾಜ್, ಕಾರ್ಯದರ್ಶಿ ಅಕ್ರಂಪಾಷ, ಸದಸ್ಯರಾದ ಹಿದಾಯುತುಲ್ಲಾ ಖಾನ್, ಅಲ್ಲಾಬಕಷ್, ಎಸ್ಡಿಎಂಸಿ ಅಧ್ಯಕ್ಷ ಹಿದಾಯುತುಲ್ಲಾ ಖಾನ್, ಉಪಾಧ್ಯಕ್ಷ ಸಫೀನಾ, ಮುಖ್ಯ ಶಿಕ್ಷಕ ಮಹ್ಮದ್ ಸಾಧಿಕ್, ಶಿಕ್ಷಕರಾದ ರಿಹಾನಖಾನಮ್, ಅಸ್ಮಸುಲ್ತಾನ , ಭಾರತಮ್ಮ, ನುಸ್ರಕ್ ಅಮ್ಮಾಜಾನ್, ಗುಲ್ ಅಬ್ ಷ, ಕುಬ್ರಾಐಮನ್ ಇದ್ದರು.