PHOTOS: ASHOKA SUVARNA EDITOR: BERNARD DCOSTA
ಕುಂದಾಪುರ,ಮಾ.28: ಜನರನ್ನು ಸಂಪರ್ಕಿಸುವುದು ಜನಪ್ರತಿನಿಧಿಯ ಕೆಲಸ. ವಿಧಾನಸಭೆಯಲ್ಲೋ, ಲೋಕಸಭೆಯಲ್ಲೋ ಹೋಗಿ ಕೂತು ಬರುವುದಪ್ಪೇ ಅಲ್ಲ ಅಧಿಕಾರದಲ್ಲಿದ್ದಾಗಲೂ, ಅಧಿಕಾರದಲ್ಲಿ ಇಲ್ಲದೇ ಇರುವಾಗಲೂ ನಿರಂತರ ಜನ ಸಂಪರ್ಕ ಹೊಂದಬೇಕಾಗಿರುವುದು ಒಬ್ಬ ಜನಪ್ರತಿನಿಧಿ ಮಾಡಬೇಕಾಗಿರುವ ಕೆಲಸ. ಭಾರತೀಯ ಜನತಾ ಪಾರ್ಟಿಯಲ್ಲಿ ಮತ ಕೇಳುವುದಕ್ಕೆ ಯಾವ ಸಾಧನೆಯೂ ಇಲ್ಲ. ಆ ಕಾರಣಕ್ಕೆ ನಾನು ಹೇಳದೇ ಇರುವ ವಿಷಯವನ್ನು ಹೇಳಿದ್ದೇನೆ ಎಂದು ಸುಳ್ಳು ಹಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಅವರು ಇಲ್ಲಿನ ಹಂಗಳೂರು ವೆಂಕಟಲಕ್ಷ್ಮಿ ಸಭಾಂಗಣದಲ್ಲಿ ಮಾ.27 ರಂದು ನಡೆಡ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಯಾರನ್ನೂ ವೈಯಕ್ತಿಕವಾಗಿ ದೂಷಣೆ ಮಾಡಿದ ಉದಾಹರಣೆಯೇ ಇಲ್ಲಿ ನಮಗೆ ನಾವು ಮಾಡಿರುವ ಸಾಧನೆಗಳೇ ಇರುವಾಗ ದೂಪಣೆಗಳು ಯಾಕೆ ಬೇಕು? ಸುಳ್ಳು ಸೃಷ್ಟಿಸಿ ವೈಯಕ್ತಿಕ ದೂಷಣೆ, ಅಪಪ್ರಚಾರ ಅವರು (ಬಿಜೆಪಿ) ಮಾಡಲಿ. ನಾವು ಪ್ರಾಮಾಣಿಕವಾಗಿ ಜನರನ್ನು ನಮ್ಮ ಕೆಲಸಗಳೊಂದಿಗೆ ತಲುಪಿದ್ದೇವೆ. ಚುನಾವಣಾ ಪೂರ್ವದಲ್ಲಿ ರಾಜಕೀಯ ಕೆಸರೆರಚಾಟ, ದೂಷಣೆಗಳು ನಮಗೆ ಬೇಡವೇ ಬೇಡ. ನಮ್ಮೊಂದಿಗೆ ನಾವು ಮಾಡಿದ ಸಾಧನೆಗಳಿವೆ. ಜನರನ್ನು ತಲುಪುವುದಕ್ಕೆ ನಮ್ಮೊಂದಿಗಿರುವ ಸಾಧನೆಗಳು, ಅಭಿವೃದ್ಧಿ ಕೆಲಸಗಳೇ ಸಾಕು. ಜನರು ನಮ್ಮ ಕೆಲಸಗಳಿಂದ ಗುರುತಿಸಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ತಲುಪಿಸಿದ್ದೇ ಸರ್ಕಾರದ ತಪ್ಪಾದರೇ, ದೊಡ್ಡ ದೊಡ್ಡ ಕಂಪೆನಿಗಳ, ಉದ್ಯಮಗಳ ಸಾಲ ಮನ್ನ ಮಾಡಿದ್ದು, ತೆರಿಗೆ ವಿನಾಯಿತಿ ಮಾಡಿದ್ದು ಸರಿಯೇ ? ಎಂದು ಅವರು ಪ್ರಶ್ನೆ ಮಾಡಿದ್ದಲ್ಲದೇ, ಕಷ್ಟದಲ್ಲಿರುವವರಿಗೆ ಸ್ಪಂದಿಸುವಂತದ್ದು ಸರ್ಕಾರದ ಕರ್ತವ್ಯ ಆಗಿದೆ. ನಾವು ಜನರಿಗೆ ಕೊಟ್ಟಿರುವ ಯೋಜನೆಗಳು, ಕೆಲಸಗಳು ಜನರಿಗೆ ತಿಳಿದಿದೆ. ನಾವು ಈಗ ಅವರಿಗೆ ಮತ್ತೆ ನೆನಪಿಸುವಂತಹ ಕೆಲಸ ಮಾಡಬೇಕಿದೆ. ನಮ್ಮ ಸರ್ಕಾರ ಕೊಟ್ಟಿರುವ ಯೋಜನೆಗಳು, ನಾವು ಮಾಡಿರುವ ಕೆಲಸಗಳು, ಸಾಧನೆಗಳು ಮಾತಾಗಿದೆ, ಮಾತು ಮತಗಳಾದಿ ಪರಿವರ್ತನೆಯಾಗುವಲ್ಲಿ ನಾವೆಲ್ಲರೂ ಶ್ರಮಿಸಬೇಕಿರುವ ಅಗತ್ಯವಿದೆ’ ಎಂದು ಅವರು ಹೇಳಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿ, ಹೆಗ್ಡೆಯವರು ಉಡುಪಿ ಜಿಲ್ಲೆಯ ಸೃಷ್ಟಿಕರ್ತರು. ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಜನನಾಯಕ ನಮ್ಮ ಸಂಸದ ಅಭ್ಯರ್ಥಿಯಾಗಿರುವುದು ನಮಗೆ ಹೆಮ್ಮೆ, ನಾವೆಲ್ಲರೂ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವಲ್ಲಿ ಅವಿರತ ಶ್ರಮ ವಹಿಸಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳು ಹಳ್ಳಿಹಳ್ಳಿಯ ಮನೆಮನೆಗೆ ತಲುಪಿವೆ : ದಿನೇಶ್ ಹೆಗ್ಡೆ
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಭರವಸೆ ಇರಲಿಲ್ಲ. ಆದರೇ, ನಮ್ಮ ಸರ್ಕಾರ ಈಗ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳು ಹಳ್ಳಿಹಳ್ಳಿಯ ಮನೆಮನೆಗೆ ತಲುಪಿವೆ. ನಾನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯೋಜನೆಗಳು ಅನುಷ್ಠಾನವಾಗದೇ ಇದ್ದರೇ, ಮುಂದಿನ ಚುನಾವಣೆತಯಲ್ಲಿ ಮತ ಕೇಳುವುದಕ್ಕೆ ಐರುವುದಿಲ್ಲ ಎಂದು ಇಲ್ಲಿನ ಜನರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತು ಕೊಟ್ಟಿದ್ದೆ ನಮ್ಮ ಯೋಜನೆಗಳು ಜನರನ್ನು ತಲುಪಿವೆ. ಮತ ಕೇಳುವುದಕ್ಕೆ ಯಾವ ಹಿಂಜರಿಕೆ ಬೇಡ. ನಮಗೆ ಬೇರೆ ಯಾವ ವಿಷಯಗಳು ಅಗತ್ಯವೇ ಇಲ್ಲ. ಮೀನುಗಾರಿಕಾ ಸಚಿವರಾಗಿದ್ದಾಗ, ಸಂಸದರಾಗಿದ್ದಾಗ ಜಯಪ್ರಕಾಶ್ ಹೆಗ್ಡೆ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಗೆ ಕೊಳ್ಳೆಬೈಲು, ಮುಖಂಡರುಗಳಾದ ಮಲ್ಯಾಡಿ ಶಿವರಾಮ ಶೆಚ್ಛಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್ ರಾಜು ಪೂಜಾರಿ, ಹಿರಿಯಣ್ಣ ಜಾತ್ರಬೆಟ್ಟು, ಸಧಾನಂದ ಶೆಟ್ಟಿ ಕೆಥೂರು, ಕಾಂಗ್ರೆಸ್ ಜಿಲ್ಲಾ ವಕ್ತಾರ ವಿಕಾಸ್ ಹೆಗ್ಗೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಕಟಿ ಕಾನಕ ಸೇರಿ ಮೊದಲಾದವರು ಉಪಸ್ಥಿತರಿದರು.