ಶ್ರೀನಿವಾಸಪುರ : ಮಾನಸಿಕ ಹಾಗು ದೈಹಿಕವಾಗಿ ಸದೃಡವಾಗಲು ಸಾದ್ಯ ಇದಲ್ಲದೆ ಪ್ರತಿ ದಿನ ಭಜನೆ, ದೇವರಸ್ಮರಣೆ, ದ್ಯಾನ, ಮಾಡುವುದರಿಂದ ಆರೋಗ್ಯ ಜೀವನವನ್ನು ನಡೆಸಬಹುದಾಗಿದೆ ಎಂದು ಕೈವಾರ ಕ್ಷೇತ್ರ ಮಠದ ಧರ್ಮಾಧಿಕಾರಿ ಡಾ|| ಎಂ.ಎರ್. ಜಯರಾಮ್ ನುಡಿದರು.
ಪಟ್ಟಣದ ಕಟ್ಟೆಕೆಳಗಿನ ಪಾಳ್ಯದಲ್ಲಿ ಶ್ರೀ ನೀಳಾ ಮತ್ತು ಭೂನೀಳಾ ಸಮೇತ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಯ ನೂತನ ಶಿಲಾ ಬಿಂಬ ಮತ್ತು ಅಭಯಾಂಜನೇಯಸ್ವಾಮಿ ಮತ್ತು ಮಹಾಗಣಪತಿ ಮತ್ತು ಗರುಡ , ಜಯವಿಜಯ ದ್ವಾರಪಾಲಕ ನೂತನ ಶಿಲಾ ಬಿಂಬಗಳ ಪ್ರತಿಷ್ಠಾಪನೆ ಮತ್ತು ವಿಮಾನಗೋಪುರ ಮತ್ತು ನೂತನ ದೇವಾಲಯ ಜೀರ್ಣೋದ್ದಾರ ಮಹೋತ್ಸ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.
ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೂರು ದಿನಗಳು ವಿವಿಧ ಪೂಜೆಗಳನ್ನು ಹಾಗು ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು . ಶುಕ್ರವಾರ ಮೂಲಮೂರ್ತಿಗಳಿಗೆ ವೇಧಘೋಷಗಳೊಂದಿಗೆ ಪಂಚಾಮೃತ ಪಂಚಸೂತ್ರಗಳೊಂದಿಗೆ ಅಭಿಷೇಕ, ಅರ್ಚನೆ, ವಿಶೇಷ ಹೂವಿನ ಅಲಂಕಾರ ಮಹಾಮಂಗಳರಾತಿ , ತೀರ್ಥ ಪ್ರಸಾದ ಹಾಗು ಅನ್ನಸಂತರ್ಪನೆ ನಡೆಯಿತು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕೊಚಿಮುಲ್ ನಿರ್ದೇಶಕ ಹನುಮೇಶ್, ಕೈವಾರ ಕ್ಷೇತ್ರ ಮಠದ ಸಂಚಾಲಕ ಬಾಲಕೃಷ್ಣ ಭಾಗವತರ್, ದೇವಾಲಯದ ಧರ್ಮದರ್ಶಿ ಬಿ.ಎಮ್.ಪ್ರಕಾಶ್, ದೇವಾಲಯದ ಸದಸ್ಯರಾದ ಹೂ ಅಂಗಡಿ ಪ್ರಸಾದ್, ಹೇಮಂತ್, ಶ್ರೀನಾಥ್, ಹೊದಲಿ ಶ್ರೀನಿವಾಸ್, ಪುರಸಭಾ ಸದಸ್ಯ ಬಿ.ಎಂ.ಭಾಸ್ಕರ್, ಮುಖಂಡರಾದ ಬಿ.ಎಮ್.ರಾಮಚಂದ್ರಯ್ಯ, ಬಿ.ಎಲ್.ಸೂರ್ಯನಾರಾಯಣ, ಕೆ.ಕೆ.ಮಂಜು, ನಾಗದೇನಹಳ್ಳಿ ಸೀತರಾಮರೆಡ್ಡಿ, ಕಾರ್ಯಕರ್ತರು ಕಲಾಶಂಕರ್, ಆಟೋ ಜಗದೀಶ್, ನಿತ್ತೋಳ್ಳ ಕೃಷ್ಣಪ್ಪ, ಪ್ರಸಾದ್ , ನಾಗರಾಜ್, ಗೌತಮ್ , ಬಾಬು, ಮಂಜುನಾಥ್, ಅಶ್ವತರೆಡ್ಡಿ, ನಾಗೇಂದ್ರ ಮನೋಹರ ಇದ್ದರು.