ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದರೆ ಮಾತ್ರ ಸಾಧ್ಯ – ಪಿಡಿಒ ನರೇಂದ್ರಬಾಬು

ಶ್ರೀನಿವಾಸಪುರ 1 : ದೇಶಕ್ಕೆ ಬೆನ್ನೆಲುಬಾದ ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದ ಮಾತ್ರ ಸಾಧ್ಯ . ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಯುವ ಸಮುದಾಯ ಇರಲೇಬೇಕು ಎಂದು ಪಿಡಿಒ ನರೇಂದ್ರಬಾಬು ಹೇಳಿದರು.
ರಾಯಲ್ಪಾಡು ಪ್ರೌಡಶಾಲೆಯಲ್ಲಿ ಗುರುವಾರ ಹೋಬಳಿಯ ಮಟ್ಟದ 2023-24 ನೇ ಸಾಲಿನ 6 ದಿನಗಳ ಕ್ರೀಡಾಕೂಟದ ಪೂರ್ವಭಾವಿ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ಒಂದು ಅವಿಬಾಜ್ಯ ಅಂಗ ಕ್ರೀಡೆಯಲ್ಲಿ ಪಾಲ್ಗೂಳ್ಳುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಮನಸ್ಸು ಉಲ್ಲಾಸವಾಗಿ ,ಏಕಾಗ್ರತೆಯು ಬೆಳೆಯುತ್ತದೆ ಎಂದು ತಿಳಿಸಿದರು. ಕ್ರೀಡೆಗಳು ಎಂದ ಮೇಲೆ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೊಬಾವ ಮರೆಯಬೇಕು ಎಂದರು.
ಇದೇ ತಿಂಗಳು 24 ರಿಂದ 29 ರ ವರೆಗೆ ನಡೆಯುವ ಕ್ರೀಡಾಕೂಟಕ್ಕೆ ಬೇಕಾದ ಊಟದ , ಬಹುಮಾನಗಳ ವ್ಯವಸ್ಥೆ ಹಾಗೂ ಇತರೆ ಕ್ರೀಡೆಗಳಿಗೆ ಬೇಕಾದ ಸೌಲಭ್ಯಗಳ ಕುರಿತು ಚರ್ಚಿಲಾಯಿತು.
ಹೋಬಳಿ ಮಟ್ಟದ ಕ್ರೀಡಾಕೂಟಗಳ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಕೆ.ಎನ್.ರಾಮಚಂದ್ರ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಆಟವು ಒಂದು ಅಂಗವಾಗಿದ್ದು, ಶಿಕ್ಷಕರು ತಮ್ಮ ತಮ್ಮ ಶಾಲೆಗಳಿಗೆ ಸಂಬಂದಿಸಿದ ಕ್ರೀಡಾಶಕ್ತಿ ಇರುವಂತಹ ವಿದ್ಯಾರ್ಥಿಗಳನ್ನು ಕ್ರೀಡಾಕೂಟಕ್ಕೆ ಕರೆತರುವುದು ಎಂದು ಸಲಹೆ ನೀಡಿದರು. ಹೋಬಳಿ ಮಟ್ಟ ಕ್ರೀಡಾಕೂಟವನ್ನು ದಾನಿಗಳು, ಗ್ರಾಮಸ್ಥರು, ಪ್ರಾಥಮಿಕ , ಪ್ರೌಡಶಾಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಸಿಮೆಂಟ್‍ನಾರಾಯಣಸ್ವಾಮಿ, ಸಿ.ಎಸ್.ವೆಂಕಟರಮಣಪ್ಪ, ಆಂಜಿ, ಸಿ.ವಿ.ಮಂಜುನಾಥ್, ಚಕ್ಕಾ ಅಪ್ಪಿ, ಮುಖ್ಯ ಶಿಕ್ಷಕ ಪಿ.ಮಾರಣ್ಣ, ಸಿಆರ್‍ಪಿ ವರದರೆಡ್ಡಿ, ಮುಖ್ಯ ಶಿಕ್ಷಕರಾದ ಎಂ.ಕೆ.ವೆಂಕಟರಮಣ, ಮಂಜೇಶ್, ಕಾವೇರಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ತಪಸ್ವಿ ಶಾಲೆಯ ಶಿಕ್ಷಕ ಬಾಬು, ವಾಸವಿ ಶಾಲೆಯ ಶಿಕ್ಷಕ ಲಲಿತ , ಪ್ರೌಡಶಾಲಾ ಕಚೇರಿ ಸಿಬ್ಬಂದಿ ಆರೀಫ್ ಇದ್ದರು.