ಶ್ರೀನಿವಾಸಪುರ : ಸರ್ಕಾರಿ ನೌಕರರು ಸಂಬಳಕ್ಕಾಗಿ ಮಾತ್ರವೇ ಸೇವೆ ಸಲ್ಲಿಸಿದರೆ ಸಾಲದು ಜೊತೆಗೆ ಪ್ರಾಮಾಣಿಕತೆಯೂ ಇದ್ದರೆ ಜೀವನಪೂರ್ತಿ ಸಾರ್ಥಕತೆ ಇರುತ್ತದೆ ಅಂತಹ ಪ್ರಮಾಣಿಕ ವ್ಯಕ್ತಿಗಳನ್ನು ಸಾರ್ವಜನಿಕರು ಗೌರವಿಸುತ್ತಾರೆ ಎಂದು ಕಾರ್ಯ ಪಾಲಕ ಇಂಜನೀಯರ್ ಕೋಲಾರ ವಿಬಾಗ ಇಇ ಆರ್.ಚಂದ್ರಶೇಖರ್ ಹೇಳಿದರು.
ಪಟ್ಟಣದ ಪಿಡಬ್ಲೂಡಿ ಕಛೇರಿಯಲ್ಲಿ ನಿವೃತ್ತರಾದ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಎಂ.ಕೆ.ಹುಸೇನ್‍ಸಾಬ್ ರವರಿಗೆ ಬೀಳ್ಕೋಡಿಗೆ ಸನ್ಮಾನ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿ ಉತ್ತಮ ಕೆಲಸ ಕಾರ್ಯಗಳಿಂದ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದ್ದು, ಎಂ.ಕೆ.ಹುಸೇನ್‍ಸಾಬ್ 37 ವರ್ಷಗಳ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದು ಅವರ ನಿವೃತ್ತಿ ಜೀವನವು ಸಖಕರವಾಗಲಿ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಕೆ ಹುಸೇನ್ ಸಾಬ್ ಈ ಇಲಾಖೆಯಲ್ಲಿ ಕೆಲಸದ ಒತ್ತಡದಲ್ಲಿ ನಾನು ಏನಾದರು ದುಬಾರಿಯಿಂದ ಮಾತನಾಡಿ ನಿಮ್ಮ ಮನಸ್ಸ್ಸುಗಳು ನೋವಾಗಿದ್ದರೆ ಕ್ಷಮಿಸಿ ನಾನು ಇಲ್ಲಿಬಂದು ಒಂದುವರೆ ವರ್ಷಗಳಾಗಿದೆ ಎಲ್ಲಾ ಗುತ್ತಿಗೆ ದಾರರು ಮತ್ತು ನಮ್ಮ ಸಿಬ್ಬಂದಿ ಸಹಕಾರದಿಂದ ನಾನು ಉತ್ಸಾಹದಿಂದ ಕೆಲಸ ಮಾಡಲು ಸಹಕಾರಿಯಾಗಿದೆ ವಿಷೇಶವಾಗಿ ನಮ್ಮ ಇಇ ಚಂದ್ರ ಶೇಖರ್ ರವರು ತುಂಬು ಹೃದಯದಿಂದ ನನಗೆ ಕೆಲಸಮಾಡಲು ಸಹಕರಿಸಿದ್ದಾರೆ, ನನ್ನ ಅವದಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ ಎಂಬ ಆತ್ಮಸಾಕ್ಷಿನನಗಿದೆ ಎಲ್ಲರಸಹಕಾರ ನೀಡಿದ್ದಕ್ಕೆ ತುಂಬಾ ದನ್ಯವಾದಗಳು ಎಂದು ತಿಳಿಸಿದರು.
ಇದೇ ಸಮಯದÀಲ್ಲಿ ನೂತನವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಎಂ. ನಾರಾಯಣಸ್ವಾಮಿ ಅಧಿಕಾರ ಸ್ವೀಕರಿಸಿದರು.
ಈ ವೇಳೆಯಲ್ಲಿ ಸಣ್ಣನೀರಾವರಿ ಸಚಿವರ ಆಪ್ತ ಕಾರ್ಯದರ್ಶಿ ಅರುಣ್, ಕೆ.ಸಿ ವ್ಯಾಲಿ ಇಂಜನೀಯರ್ ಕೃಷ್ಣ, ಎಂ.ಐ ಇಲಾಖೆಯ ಎಕ್ಸಿಕ್ಯೂಟಿವ್ ಇಂಜನೀಯರ್ ಕುಮಾರಸ್ವಾಮಿ, ಇಂಜನೀಯರ್‍ಗಳಾದ ಎಲ್.ಎಂ.ನಾಗರಾಜ್, ಗೋವಿಂದಪ್ಪ, ಚಲಪತಿ, ಟಿ.ನಾಗರಾಜ್, ಕಛೇರಿ ವ್ಯವಸ್ಥಾಪಕ ಮುನಿರಾಜು, ಹಾಗು ಗುತ್ತಿಗೆ ದಾರರಾದ ಆಲವಾಟ ಮಂಜುನಾಥ್ ರೆಡ್ಡಿ, ಶಿವಪುರ ವೆಂಕಟೇಶ್, ಜೆ.ವಿ ಕಾಲೋನಿ ವೆಂಕಟೇಶ್, ಕಂಬಾಲಪಲ್ಲಿ ಶ್ರೀನಿವಾಸ್, ರವಣಪ್ಪ, ಕಲ್ಲುಕುಂಟೆ ಮಂಜು, ದಿಂಬಾಲ ಮಂಜುನಾಥ್ ರೆಡ್ಡಿ, ನಿವೃತ್ತ ಎಇಇ ಶ್ರೀನಿವಾಸಮೂರ್ತಿ, ಟೆಂಕಾಯಿಲು ಶ್ರೀನಿವಾಸ್, ಹಾಗು ಕಛೇರಿಸಿಬ್ಬಂದಿ ಉಪಸ್ಥಿತರಿದ್ದರು.