ರಾಯಲ್ಪಾಡು 1 : ವಿದ್ಯಾರ್ಥಿಗಳು ಕೇವಲ ಜೀವನದ ಗುರಿಯನ್ನು ಮುಟ್ಟಲು ಕೇವಲ ಕನಸನ್ನು ಕಾಣದೇ ಜೀವನದ ಗುರಿಯನ್ನು ಸಾಧಿಸುವ ಛಲವನ್ನು ಸದಾ ನಿರಂತರವಾಗಿ ಮನದಮಟ್ಟು ಮಾಡಿಕೊಳ್ಳುತ್ತಾ, ಗುರು ಹಿರಿಯರ ಮಾರ್ಗದರ್ಶನ ಪಡೆದು ಜೀವನದ ಗುರಿಯನ್ನು ಮುಟ್ಟುವಂತೆ ಬೆಂಗಳೂರಿನ ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಪತ್ತಿ ಸೀತರಾಮಯ್ಯ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ಕೋಲಾರ-ಬೆಂಗಳೂರು ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬಕ್ಸ್ , ಲೇಖನಿ ಸಾಮಗ್ರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ನ ಕೋಲಾರ ವಿಭಾಗದ ಅಧ್ಯಕ್ಷ ಬಿ.ಎಸ್.ಗೋವಿಂದರಾಜು ಮಾತನಾಡಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉನ್ನತ ಅಧಿಕಾರಿಗಳಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇದ್ದು, ಶಿಕ್ಷಕರು ಭೋದಿಸುವ ಪಾಠಪ್ರವಚನಗಳನ್ನು ಆಲಿಸಿ , ಶ್ರದ್ಧಾ ಭಕ್ತಿಯಿಂದ ಓದುವಂತೆ ಸಲಹೆ ನೀಡಿದರು.
ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್ ಮಾತನಾಡಿ ಸರ್ಕಾರದಿಂದ ನೀಡುವಂತಹ ಹಾಗೂ ದಾನಿಗಳು ನೀಡುವಂತಹ ಕಲಿಕಾ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗುವಂತೆ ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕ ಪಿ.ಮಾರಣ್ಣ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಣವಂತರು ಬಡಮಕ್ಕಳನ್ನು ಶೈಕ್ಷಣಿಕ ಪ್ರಗತಿಯನ್ನು ಹೊಂದಲು ತಮ್ಮಿಂದಾಗುವ ಆರ್ಥಿಕ ಸಹಾಯ ಹಾಗು ಶಿಕ್ಷಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಡುಗೆಯನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ ಆಶಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು. ಅಲ್ಲದೆ 8, 9, 10 ನೇ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪತ್ತಿ ಸೀತರಾಮಯ್ಯರವರು ನಗದು ಬಹುಮಾನ ವಿತರಣೆ ಮಾಡಿದರು.
ಉಪಾಧ್ಯಕ್ಷ ಎಂ.ಯುವರಾಜು, ಟ್ರಸ್ಟ್‍ನ ಸದಸ್ಯ ಬಾಲರಾಜು, ಸಿಆರ್‍ಪಿ ವರದರೆಡ್ಡಿ ಮಾತನಾಡಿದರು. ಟ್ರಸ್ಟ್‍ನ ಪಿಆರ್‍ಒ ಜಯಮಾಲ, ಕಾರ್ಯದರ್ಶಿ ಡಿ.ಕೆ.ನಾಗರಾಜ್, ಖಜಾಂಚಿ ಎಂ.ಆರ್.ಶ್ರೀನಿವಾಸಮೂರ್ತಿ, ಸಹ ಖಜಾಂಚಿ ಬಿ.ಎಚ್.ರಮೇಶ್‍ಕುಮಾರ್, ಸದಸ್ಯರಾದ ಪಿ.ಆರ್. ಅಮರನಾಥ್, ಎ.ಎನ್.ಚಂದ್ರಶೇಖರ್, ಬಿ.ವಿ.ಶ್ರೀದೇವಿರಾಜ್, ರಾಯಲ್ಪಾಡು ವಾಸವಿ ಸಂಘದ ಸದಸ್ಯರಾದ ಸುಬ್ಬರಾಜಶೆಟ್ಟಿ, ಮಿಟ್ಟಾ ಪ್ರಸಾದ್, ರಾಧಪ್ರಸಾದ್, ಸಿ.ವಿ.ಮಂಜುನಾಥ್, ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್, ಗ್ರಾಮದ ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಸಿ.ಎಸ್.ವೆಂಕಟರಮಣಪ್ಪ, ಶಾಲೆಯ ಮುಖ್ಯ ಪಿ.ಮಾರಣ್ಣ, ಸಿಆರ್‍ಪಿ ವರದರೆಡ್ಡಿ ಇದ್ದರು.