ಶ್ರೀನಿವಾಸಪುರ : ತಾಲೂಕಿನ ಹೊಗಳಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಓದು ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ1 ನೇ ತರಗತಿಯಿಂದ 7ನೇ ತರಗತಿಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ದಿನ ಓದುವ ಅಭಿಯಾನ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ ಬಿಆರ್ಸಿ ಕೆ.ಸಿ.ವಸಂತ ಕರೆ ನೀಡಿದರು.
ಸರ್ಕಾರದ ಆದೇಶದಂತೆ ನಡೆಯುವ ಈ ಕಾರ್ಯಕ್ರಮ ಉತ್ತಮವಾದ ಯೋಜನೆಯಾಗಿರುತ್ತದೆ ಈ ದಿನದಿಂದ 21 ದಿನಗಳ ಕಾಲ ವಿವಿಧ ರೀತಿಯ ಚಟುವಟಿಕೆಗಳನ್ನು ಆಧರಿಸಿ ಈ ಕಾರ್ಯಕ್ರಮ ನಡೆಯುವುದಾಗಿದೆ . ಈ ದಿನ ಪುಸ್ತಕ ಲೇಖನ ಗ್ರಂಥಾಲಯ ಪುಸ್ತಕಗಳನ್ನ ಓದುವ ಮುಖಾಂತರ ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು ಶ್ಲಾಘನೀಯ ಕಥೆ ಕಟ್ಟುವುದು ಧಾರ್ಮಿಕ ಕಥೆ ಓದುವುದು ಗಣೇಶ ಚತುರ್ಥಿ, ಈದ್ ಮಿಲಾದ್ ಸಾರ್ವಜನಿಕ ಗ್ರಂಥಾಲಯ ಅಜ್ಜಿ ತಾತರ ಕಥೆಗಳು ಮನೆಯ ಹಿರಿಯರ ಕಥೆಗಳು ಚಿತ್ರಪಟದ ಕಥೆಗಳು ಅಭಿನಯದ ಕಥೆಗಳು ಪಾತ್ರ ಅಭಿನಯದ ಕಥೆಗಳು ಸ್ವರಚಿತ ಕಥೆಗಳು ಇವೆಲ್ಲವೂ ಸಹ ಈ 21 ದಿನಗಳ ಕಾಲದಲ್ಲಿ ರೂಡಿಸಿಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ನುಡಿದರು .
ಮಕ್ಕಳಿಗೆ ಉತ್ತಮವಾದ ಓದು ಗಟ್ಟಿ ಓದು ವ್ಯಾಕರಣ ಬದ್ಧವಾಗಿ ಓದುವುದನ್ನು ಮಾದರಿಯಾಗಿ ತಿಳಿಸಿಕೊಟ್ಟರು .
ಬಿಐಆರ್ಟಿಐ ಅಧಿಕಾರಿ ಜಿ.ವಿ.ಚಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯ ಶಿಕ್ಷಕರು ಎಸ್.ಪಿ.ವೆಂಕಟರತ್ನಮ್ಮ ಉಮಾದೇವಿ, ಶ್ರೀಲಕ್ಷ್ಮಿ ಹಾಗೂ ಶಾಲಾ ಸಿಬ್ಬಂದಿ ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಪ್ರಮಾಣ ವಚನ ನೀಡಲಾಯಿತು.