ಶ್ರೀನಿವಾಸಪುರ 1 : ಆರೋಗ್ಯವೇ ಭಾಗ್ಯ ಎಂಬಂತೆ ಮನುಷ್ಯನ ಆರೋಗ್ಯ ಕೈ ಕೊಟ್ಟಾಗ ನೆಮ್ಮದಿ ಮಾಯಾವಾಗುವುದರ ಜೊತೆಗೆ ಅರ್ಥಿಕ ಸ್ಥಿತಿ ದುಸ್ಥಿತಿಯಲ್ಲಿದ್ದಾಗ ಸಮಾಜದ ದುರ್ಬಲ ವರ್ಗದ ಜನರು ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗದೇ ಹತಾಶರಾಗುವುದು ದುರಂತ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಛೇರಿಯಲ್ಲಿ ಗುರುವಾರ ಶ್ರೀನಿವಾಸಪುರ ತಾಲ್ಲೂಕಿನ 15 ಮಂದಿಗೆ ರೂ ಒಂದು ಲಕ್ಷ ಎಂಟು ಸಾವಿರ ಮೊತ್ತದ ಆರೋಗ್ಯ ರಕ್ಷಾ ವಿಮಾ ಮೊತ್ತ ವಿತರಣೆ ಮಾಡಿ ಮಾತನಾಡಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ವೇಮಣ್ಣರವರು ಆರೋಗ್ಯ ವಿಮಾ ಸೌಲಭ್ಯದ ಚೆಕ್ ವಿತರಣೆ ಮಾಡಿ ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ಪ್ರತಿಯೊಂದು ಕ್ಷೇತ್ರದಲ್ಲೂ ಸಮಾಜಮುಖಿ ಚಿಂತನೆ ಕಾಳಜಿಯಿಂದ ಪ್ರಾಮಾಣಿಕ ಕೆಲಸ ಮಾಡುತ್ತಿದ್ದು ಎಲ್ಲೂ ಕೂಡಾ ಸೌಲಭ್ಯಗಳು ಸೋರಿಕೆಯಾಗದಂತೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದರು..
ಕಾರ್ಯಕ್ರಮದಲ್ಲಿ ತಾಲ್ಲೂಕು ಹಣಕಾಸು ಪ್ರಭಂಧಕರಾದ ಆನಂದ್, ಆಡಳಿತ ಪ್ರಭಂಧಕರಾದ ಮನೀಷಾ, ತಾಲ್ಲೂಕು ನೊಡಲ್ ಅಧಿಕಾರಿ ಪ್ರತಾಪ್ ಉಪಸ್ಥಿತರಿದ್ದರು.