JANANUDI.COM NETWORK

ಸರಕಾರ ತನ್ನ ಕನಿಷ್ಠ ಜವಾಬ್ದಾರಿಗಳನ್ನು ಒಂದು ಐತಿಹಾಸಿಕ ಸಾಧನೆ ಎನ್ನುವುದು ಸರಿಯಲ್ಲ. ಯಾವುದೇ ಯಶಸ್ಸು ಮೈಮರೆವಿಗೆ ಕಾರಣವಾಗಬಹುದು. ನಮ್ಮ ದೇಶದ ಜನಸಂಖ್ಯೆ ಮಕ್ಕಳನ್ನು ಸೇರಿಸಿದರೆ 136 ಕೋಟಿಗಿಂತ ಹೆಚ್ಚು. ಸರಕಾರ ತನ್ನ ಬೆನ್ನು ತಟ್ಟಿಕೊಳ್ಳುವ ವೇಗ ಮುಂದುವರೆದರೆ ಇನ್ನೂ ಉಳಿದ 172 ಕೋಟಿ ಲಸಿಕೆ ಹಾಕಿಸಿಕೊxಳ್ಳಲು ಇನ್ನು 479 ದಿನಗಳು ಬೇಕಾಗಬಹುದು. ಕೋವಿಡ್ ಹರಡುವಿಕೆಯ ವೇಗ ಮತ್ತು ಅದು ಉಂಟು ಮಾಡಬಹುದಾದ ಅನಾಹುತ ಗಣನೆಗೆ ತೆಗೆದುಕೊಂಡರೆ ಲಸಿಕೆ ಅಭಿಯಾನದಲ್ಲಿ ಭಾರತ ಹಿಂದುಳಿದಿರುವುದು ವಿಷಾದವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಪತ್ರಿಕೆಗೆ ತಿಳಿಸಿದರು.
ಪ್ರಧಾನಿ ಮೋದಿ ಈ ಹಿಂದೆ ಘೋಷಿಸಿದ ಡಿಸೆಂಬರ್ ಅಂತ್ಯದೊಳಗೆ 18 ವರ್ಷ ಮೇಲ್ಪಟ್ಟವರಿಗೆ ಎರಡು ಡೋಸ್ ಅಭಿಯಾನದ 106 ಕೋಟಿ ಡೋಸ್ ಲಸಿಕೆ ಹಂಚಿಕೆಗೆ 70 ದಿನಗಳು ಬಾಕಿ ಇರುವುದು, ಶತಮಾನದ ಭೀಕರ ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸುವ ಹೋರಾಟದಲ್ಲಿ ಅರ್ಧ ದಾರಿಯನ್ನು ಕ್ರಮಿಸದಿರುವುದು ಸ್ಪಷ್ಟವಾಗಿದೆ.
ದೇಶದಲ್ಲಿ ಈಗಾಗಲೇ ಶಾಲೆ- ಕಾಲೇಜುಗಳು ಪ್ರಾರಂಭವಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ್ದಾರೆ. ಲಸಿಕೆ ಹಾಕಿಸಿ ಕೊಳ್ಳಬೇಕಾದ ಸಂಖ್ಯೆ 44 ಕೋಟಿ ಎಂದು ಗುರುತಿಸಿಕೊಂಡಿದ್ದರು. ಲಸಿಕೆ ಹಾಕಿಸಿಕೊಳ್ಳುವಿಕೆಗೆ ನಿರ್ಧಿಷ್ಟವಾದ ಯೋಜನೆ ಇನ್ನೂ ರೂಪಿಸಿಕೊಳ್ಳದಿರುವುದು ದುರಾದೃಷ್ಟಕರವೇ ಸರಿ.
ದೇಶಿಯವಾಗಿ ಅಭೀವೃದ್ಧಿಪಡಿಸಲಾದ ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟಿçಯ ಸಮುದಾಯದ ಮಾನ್ಯತೆ ಇನ್ನೂ ದೊಕಿಲ್ಲ. ಈ ಲಸಿಕೆ ಹಾಕಿಸಿಕೊಂಡವರಿಗೆ ವಿದೇಶಕ್ಕೆ ಮುಕ್ತವಾಗಿ ಹೋಗುವುದಕ್ಕೆ ಅವಕಾಶ ಇಲ್ಲದಿರುವುದಕ್ಕೆ ಸರಕಾರದ ವತಿಯಿಂದ ಮುತುವರ್ಜಿ ಕಂಡುಬ0ದಿಲ್ಲ.
ಕೋವಿಡ್‌ನಿ0ದ ನಮ್ಮ ದೇಶದ ಲಕ್ಷಾಂತರ ಜನರು ಸತ್ತಿದ್ದು ಅವರಿಗೆ ಪರಿಹಾರ ನೀಡದ ಸರಕಾರ, ಸಂಭ್ರಮಾಚರಣೆ ಮಾಡುವಂತದ್ದು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಅಪಾಯಕಾರಿ ಪ್ರಯತ್ನವೆಂದರು.