ಶ್ರೀನಿವಾಸಪುರ : ವಿಕಲ ಚೇತನರು ಎಂದಾಕ್ಷಣ ಕೈಲಾಗದವರು ಎಂರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮಾಥ್ರ್ಯವಿರುತ್ತದೆ . ಸೋಮಾರಿಗಳಾಗದೇ ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಗುರುವಾರ 22 ವಿಶೇಷ ಚೇತನರಿಗೆ ತ್ರಿಚಕ್ರವಾಹನಗಳನ್ನು ವಿತರಿಸಿ ಮಾತನಾಡಿದರು.
ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಶೇಷ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪುಯೋಗಪಡಸಿಕೊಂಡು ಸ್ವಾವಲಂಬಿ ಬದುಕು ಸಾಧಿಸಬೇಕು ಎಂದು ಸಲಹೆ ನೀಡಿದರು. ಹಾಗೂ ಪ್ರತಿಯೊಬ್ಬರಲ್ಲಿ ವಿಶೇಷ ಕೌಶಲ, ಪ್ರತಿಭೆ ಇರುತ್ತದೆ. ಹಾಗೆಯೇ ವಿಕಲಾಂಗರಲ್ಲೂ ಇರುತ್ತದೆ . ಸರ್ಕಾರ ಯೋಜನೆಗಳ ಸದುಪುಯೋಗ ಪಡೆದು ನೆಮ್ಮದಿ ಜೀವನ ನಡೆಸಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪುರಸೆಭೆ ಸದಸ್ಯರಾದ ಶಾಂತಮ್ಮ, ವಿಜಯಲಕ್ಷ್ಮಿ, ವ್ಯವಸ್ಥಾಪಕ ನವೀನ್ಚಂದ್ರ, ಕಂದಾಯ ಅಧಿಕಾರಿ ವಿ.ನಾಗರಾಜ್, ಆರೋಗ್ಯ ನಿರೀಕ್ಷಕ ಕೆ.ಜೆ.ರಮೇಶ್, ಸಿಬ್ಬಂದಿಗಳಾದ ಸಂತೋಷ್ ಸುರೇಶ್, ನಾಗೇಶ್, ಗೌತಮ್, ಶಿವಕುಮಾರ್ ಇದ್ದರು