“ಹಮಾಸ್ 3,200 ಬಾರಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಇಸ್ರೇಲ್ ಅತ್ಯಂತ ಆಧುನಿಕ ಐರೊನ್ ಡೋಮ್ ತಂತ್ರಗಾರಿಕೆಯಿಂದ, ಆಕಾಶ ಮಾರ್ಗದಲ್ಲೆ ಬರುತ್ತಿರುವ ರಾಕೆಟಗಳನ್ನು ಹೊಡೆದುರೂಳಿಸಿ ತನ್ನ ರಕ್ಷಣೆಯನ್ನು ಕಂಡುಕೊಂಡಿದೆ“
JANANUDI.COM NETWORK
ಗಾಜಾ,ಮೇ. 21: ಇಸ್ರೇಲ್ ಮತ್ತು ಪ್ಯಾಲೇಸ್ತಿನಿನ ಹಮಾಸ್ ಬಂಡುಕೋರದ ಮಧ್ಯೆ ವಾಯು ಮುಂದುವರಿದೆ ಇರುವಾಗ ಗಾಜಾದಲ್ಲಿ 450 ಕಟ್ಟಡಗಳು ಧ್ವಂಸವಾಗಿದ್ದು, 52 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರನ್ನು ಆ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.
ವಿಶ್ವಸಂಸ್ಥೆಯ ನೆರವು ತಂಡದ ಅಧಿಕಾರಿ ವಕ್ತಾರರಾದ ಜೆನ್ಸ್ ಲಾರ್ಕೆ ಈ ಕುರಿತು ಮಾಹಿತಿ ನೀಡಿ ಇಸ್ರೇಲ್ ವಾಯುದಾಳಿಯಿಂದ 50,000ಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನಿಯರ ವಿವಿಧ ಶಾಲೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.ಎಂದು ತಿಳಿಸಿದ್ದಾರೆ.
6 ಆಸ್ಪತ್ರೆಗಳು ಮತ್ತು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಗಾಜಾದಲ್ಲಿ ಒಟ್ಟು 132 ಕಟ್ಟಡಗಳು ಸಂಪೂರ್ಣ ನೆಲಸಮವಾಗಿದ್ದು 316 ಕಟ್ಟಡಗಳು ಭಾಗಶಃ ನೆಲಸಮವಾಗಿವೆ.
ಹಗೇ ಇಸ್ರೇಲ್ನ ವಾಯುದಾಳಿಯಿಂದ ಗಾಜಾದ 61 ಮಕ್ಕಳು, 36 ಮಹಿಳೆಯರು ಸೇರಿ 212 ಪ್ಯಾಲೆಸ್ತೀನಿಯರ್ ಮೃತಪಟ್ಟಿದ್ದಾರೆ. ಸುಮಾರು 1,400 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಇನ್ನೂ ಸಂಘರ್ಷ ಮುಂದುವರಿದಿದ್ದು ಕಳೆದ ರಾತ್ರಿ ಹಲವು ಕಡೆ ಇಸ್ರೇಲ್ ವಾಯುದಾಳಿಯನ್ನು ಮುಂದುವರೆಸಿದೆ..
ಹಾಗೇ ಹಮಾಸ್ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಿಂದ 10ಮಂದಿ ಇಸ್ರೇಲಿಯನರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ತಿಳಿಸಿದ್ದು, ಹಮಾಸ್ 3,200, ಬಾರಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಹೆಚ್ಚಿನ ಇ ರಾಕೆಟಗಳನ್ನು ಐರೊನ್ ಡೋಮ್ (ಆಕಾಶ ಮಾರ್ಗದಲ್ಲೆ ಬರುತ್ತಿರುವ ರಾಕೆಟಗಳನ್ನು ಹೊಡೆದುರೂಳಿಸುವ ಅತ್ಯಂತ ಆಧುನಿಕ ತಂತ್ರಗಾರಿಕೆಯಿಂದ, ಇಸ್ರೇಲ್ ತನ್ನ ರಕ್ಷಣೆಯನ್ನು ಕಂಡುಕೊಂಡಿದೆ. ಅಮೇರಿಕವು ಯುದ್ದ ನಿಲ್ಲಿಸಬೇಕೆಂದು ಅಪೇಕ್ಷೆ ಪಡುತ್ತದೆ,ಆದರೆ ಇಸ್ರೇಲ್ಗೆ ತನ್ನ ರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ ಎಂದು ಹೇಳಿದೆ.