JANANUDI.COM NETWORK

ಎ. 30 ಇಸ್ರೇಲ್ ನಲ್ಲಿ ತಡರಾತ್ರಿವರೆಗೆ ನಡೆದ ಒಂದು ಧಾರ್ಮಿಕ ಸಮಾರಂಭದ ವೇಳೆ ಕಾಲ್ತುಳಿತ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು103 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ವರದಿ ಮಾಡಿವೆ.
ಲಾಗ್ ಬೋಮರ್ ಆಚರಿಸಲು ಇಸ್ರೇಲ್ ಮೌಂಟ್ ಮೆರೂರ್‌ನಲ್ಲಿ ಸಾಮೂಹಿಕ ಸಭೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಂಭ್ರಮದ ವೇಳೆ ಮೆಟ್ಟಿಲುಗಳ ಮೇಲಿಂದ ಜನರು ಒಬ್ಬರ ಮೇಲೊಬ್ಬರು ಬಿದ್ದಿರುವುದು ದುರಂತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆರೋಗ್ಯ ಅಧಿಕಾರಿಗಳು ನೀಡಿದ್ದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಘಟನಾಸ್ಥಳದಲ್ಲಿ ಅಧಿಕ ಜನ ಸಮೂಹ ನೆರೆದಿತದ್ದರು ತಿಳಿಸಿದ್ದು, ಸುಮಾರು 1 ಲಕ್ಷ ಜನ ಸೇರಿದ್ದರೆಂದು ಮಾಧ್ಯದವರು ಹೇಳಿದ್ದಾರೆ.
ದುರಂತದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್‌ಪ್ರಧಾನಿ ಬೆಂಜಮಿನ್ನೆ ತಾನ್ಯಾಹು, ಇದೊಂದು ದೊಡ್ಡ ದುರಂತ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ