JANANUDI.COM NETWORK
ಗಾಝಾ.ಮೇ13; ಇಸ್ರೇಲಿ ಫೈಟರ್ ಜೆಟ್‌ಗಳು ಗಾಜಾ ಪ್ರದೇಶದಲ್ಲಿ ಬಹು ಮಹಡಿ ಕಟ್ಟಡಗಳು ಮತ್ತು ಇತರ ಗುರಿಗಳ ಮೇಲೆ ದಾಳಿ ನಡೆಸಿದ್ದು, ಪ್ಯಾಲೆಸ್ಟೀನಿಯವರು ಮುತ್ತಿಗೆ ಹಾಕಿದ ಜಾಗದಲ್ಲಿ ಈದ್ ಅಲ್-ಫಿತರ್ ಆಚರಿಸಿ ಧಾರ್ಮಿಕ ರಜಾದಿನವನ್ನು ಆಚರಿಸಿದರು. ಗುರುವಾರ ತಮ್ಮ ಪ್ರತಿ ದಾಳಿಯನ್ನು ಪಟ್ಟುಬಿಡದ ವೈಮಾನಿಕವಾಗಿ ಬಾಂಬ್ ದಾಳಿ ಮಾಡಿದರು.
ಇಸ್ರೇಲಿ ಆಕ್ರಮಣವು ಸೋಮವಾರ ತಡವಾಗಿ ಪ್ರಾರಂಭವಾದಾಗಿನಿಂದ, ಗಾಜಾದ ಆರೋಗ್ಯ ಸಚಿವಾಲಯವು 17 ಮಕ್ಕಳು ಸೇರಿದಂತೆ ಕನಿಷ್ಠ 83 ಜನರು ಹತರಾಗಿದ್ದರೆಂದು ಹೇಳುತ್ತದೆ. ಹಾಗೇ 480 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕನಿಷ್ಠ ಆರು ಇಸ್ರೇಲಿಗಳು ಸಹ ಕೊಲ್ಲಲ್ಪಟ್ಟಿದ್ದಾರೆ. ಇಸ್ರೇಲಿ ಸೈನ್ಯವು ಗಾಜಾದಿಂದ ಪಾಲೇಸ್ತೆನಿನ ವಿವಿಧ ಜಾಗಗಳಲ್ಲಿ ನೂರಾರು ರಾಕೆಟ್‌ಗಳನ್ನು ಉಡಾಯಿಸಿದ್ದು ಅವರು ಎನ್ಕ್ಲೇವ್ನ ಪೂರ್ವದ ಜಾಗದ ಹತ್ತಿರ ಬಲವರ್ಧನೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಹಮಾಸ್ನ 10 ರಷ್ಟು ಬಂಡುಕೋರ ನಾಯಕರನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.
ಇಸ್ರೇಲಿನ ಹಲವಾರು ನಗರಗಳಲ್ಲಿ ಯಹೂದಿ ಇಸ್ರೇಲಿಗಳು ಮತ್ತು ಇಸ್ರೇಲಿನ ಪ್ಯಾಲೇಸ್ಟಿನಿಯನ್ ನಾಗರಿಕರ ನಡುವೆ ಹೆಚ್ಚು ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಲೇ ಇದಿದ್ದರಿಂದ ದಿನೇ ದಿನೆ ಸಾವಿನ ಸಂಖೆ ಜಾಸ್ತಿಯಾಗುತ್ತಿವೆ.