ಬಿಲ್ ಪಾಸ್ ಮಾಡಲು ಹಿಂದೂಸೇನೆಯ ನಾಯಕನಿಗೆ ಕಮಿಷನ್ ಬೇಡಿಕೆ ಇಟ್ಟ ಈಶ್ವರಪ್ಪ

ಕಾಂಗ್ರೆಸ್  ಕೆ.ಎಸ್.ಈಶ್ವರಪ್ಪ ಇವರನ್ನು ವಜಾಗೊಳಿಸುವಂತೆ ಒತ್ತಾಯ

JANANUDI.COM NETWORK

ಬೆಂಗಳೂರು, 28 ಕಾಮಗಾರಿಯ 4 ಕೋಟಿ ರೂ.ಗಳ ಬಿಲ್ ಗಳನ್ನು ಕ್ಲಿಯರ್ ಮಾಡಲು ಕಮಿಷನ್ ನೀಡುವಂತೆ ಆಗ್ರಹಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ವಿರುದ್ಧ ಹಿಂದೂವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ ಕೆ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರಬರೆದಿದ್ದಾರೆಂದು ತಿಳಿದು ಬಂದಿದೆ.     / ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ, ತಾನು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು, ಕೆ.ಎಸ್.ಈಶ್ವರಪ್ಪ ಅವರ ಆರ್.ಡಿ.ಪಿ.ಆರ್. ಇಲಾಖೆಗೆ ಸೇರಿದ ಅಂದಾಜು 4 ಕೋಟಿ ವೆಚ್ಚದ 108 ಕ್ಕೂ ಹೆಚ್ಚು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ಕೆಲಸ ಮುಗಿಸಿ ಒಂದು ವರ್ಷ ಕಳೆದರೂ ಇಂದಿಗೂ ಸಚಿವರಿಂದಾಗಲಿ, ಸಂಬಂಧಪಟ್ಟ ಅಧಿಕಾರಿಗಳಿಂದಾಗಲಿ ನಮಗೆ ಯಾವುದೇ ವರ್ಕ್ ಆರ್ಡರ್ ಅಥವಾ ಒಂದೇ ಒಂದು ರೂಪಾಯಿ ಪಾವತಿಸಿಲ್ಲ. ಹಣವನ್ನು ಬಿಡಗಡೆಮಾಡಲು ಕಮಿಷನ್ ನೀಡುವಂತೆ ಸಚಿವರು ಮತ್ತು ಅವರ ಬೆಂಬಲಿಗರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತೋಷ್ ಕೆ ಪಾಟೀಲ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ./  ನಾನು  ಮಾಡಿದ ಕೆಲಸದ ಬಿಲ್ ತಕ್ಷಣ ಬಿಡುಗಡೆ ಮಾಡಬೇಕು. ಏಕೆಂದರೆ ನಾವು ಆ ಕೆಲಸಕ್ಕೆ ಸಾಲ ಮಾಡಿ ಹಣವನ್ನು ಖರ್ಚು ಮಾಡಿರುವುದರಿಂದ ನಾವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಬಡ್ಡಿಗೆ ಹಣ ನೀಡಿದ ಸಾಲಗಾರರಿಂದ ತೀವ್ರ ಒತ್ತಡವಿದೆ. ಆದ್ದರಿಂದ ಆತ್ಮಹತ್ಯೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮತ್ತು ಕಾಂಗ್ರೆಸ್ ನಾಯಕ  ಎಲ್.ಹನುಮಂತಯ್ಯ ಇವರು   ಕೆ.ಎಸ್.ಈಶ್ವರಪ್ಪ ಇವರನ್ನು ಮತ್ತು  ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ  ಹಿಂದೂವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ ಕೆ ಪಾಟೀಲ್ ಅಲ್ಲದೆ  ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳು ಗುತ್ತಿಗೆಯಲ್ಲಿ 40 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೂಡ  ಆರೋಪಿಸಿದ್ದು, ರಾಜ್ಯದಲ್ಲಿ ಕಮಿಷನ್ ದಂಧೆ ಇದೆ ಎಂದು ಸಾಬೀತು ಆಗಿದಂತೆ ಆಗಿದೆ.