ಜನರ ಸಮಸ್ಯೆ ನಿವಾರಣೆಗೆ ಒಟ್ಟಾಗಿ ಶ್ರಮಿಸುವುದು ತಪ್ಪೇ-ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಜನರಿಗಾಗಿ ಒಳ್ಳೆಯ ಕೆಲಸ ಮಾಡುವುದಕ್ಕೆ ನಾನು ಶ್ರೀನಿವಾಸಗೌಡರು ಒಟ್ಟಾಗಿ ಶ್ರಮಿಸಿದ್ದೇವೆ, ಇಂತಹ ಕಾರ್ಯಗಳಿಗೆ ಕಾಂಗ್ರೆಸ್ ಆದರೆ ಏನು, ಜನತಾದಳ ಆದರೆ ಏನು ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ತಾಲ್ಲೂಕಿನ ಹೋಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜನರಿಗೆ ನೀರು, ರಸ್ತೆ ಮತ್ತಿತರ ಜನಪರವಾದ ಒಳ್ಳೆಯ ಕೆಲಸ ಮಾಡುವುದಕ್ಕೆ, ಸಂಕಷ್ಟದಲ್ಲಿರುವವರಿಗೆ ಸಾಲ ಒದಗಿಸಲು ನಾನು ಶ್ರೀನಿವಾಸಗೌಡರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಇದು ತಪ್ಪೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಶ್ರೀನಿವಾಸಗೌಡರು ಹುಟ್ಟಿ ಬೆಳೆದ ಜಾಗವಿದು, ನಂತರ ಅವರು ಅಲ್ಲಿಗೆ
ಬಂದಿದ್ದಾರೆ. ಜನರಿಗೆ ಒಳ್ಳೆಯ ಕೆಲಸ ಆಗಬೇಕೆನ್ನುವ ಕಾರಣಕ್ಕೆ ನಾವಿಬ್ಬರೂ ಒಟ್ಟಿಗೆ ಇದ್ದೇವೆ ಇದರಲ್ಲಿ ತಪ್ಪು ಹುಡುಕಬೇಡಿ ಎಂದು ಕೋರಿದರು.
ಒಳ್ಳೇಯ ಕೆಲಸ ಜತೆಯಾಗಿ ಮಾಡಿದರೆ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಏಕೆ ಎಂದು ಪ್ರಶ್ನಿಸಿ, ಅವರು ಸೇರಿದರೂ ಅಷ್ಟೇ ಸೇರದಿದ್ದರೂ ಅಷ್ಟೇ ಜನರ ಕೆಲಸ ಮಾಡಬೇಕು ಮಾಡುತ್ತಲೇ ಇರ್ತೀವಿ ಎಂದರು.
ಕೆಲವರಿಗೆ ಮಾಡೋದಕ್ಕೆ ಬೇರೇ ಏನು ಕೆಲಸವಿಲ್ಲ,ಹೀಗೆಲ್ಲಾ ಪ್ರಚಾರ ಮಾಡುತ್ತಾರೆ,ನಮಗೆ ಜನರು ಮತ್ತು ಅವರ ನೆಮ್ಮದಿ ಮುಖ್ಯ ಎಂದರು.
ಇನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿ ಸರಕಾರ ಉಳಿಯುತ್ತದೆಯಾ
ಎನ್ನುವ ಪ್ರಶ್ನೆಗೆ ಗೊತ್ತಿಲ್ಲಪ್ಪಾ. ನಾನೇನು ಜೋತಿಷ್ಯ ಹೇಳುತ್ತೀನಾ? ಬೆಲ್ಲ
ಇರುವ ಕಡೆ ನೊಣ ಬರುತ್ತದೆ ಹಾಗೆಯೇ ಕಿತ್ತಾಟ ಅದು ಇದು ಸಾಮಾನ್ಯ ಎಂದು ಪ್ರತಿಕ್ರಿಯಿಸಿದರು.